ಸುಮಂಗಲಿ ಟ್ರಸ್ಟ್‌ನಿಂದ ಸಾಧಕರಿಗೆ ಪ್ರಶಸ್ತಿ ಪ್ರದಾನ

Sumangali Trust presents awards to achievers
Published on

ಮೈಸೂರು: ಶ್ರೀರಂಗಪಟ್ಟಣದ ಸುಮಂಗಲಿ ಸೇವಾ ಟ್ರಸ್ಟ್ ವತಿಯಿಂದ ನಗರದ ಇಂಜಿನಿಯರ್‌ಗಳ ಸಂಸ್ಥೆ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ 45 ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಪರಸ್ವರ ದೇಷ, ಅಸೂಯೆ ಬಿಟ್ಟು ಸಮಾಜಮುಖಿ, ಜನಪರವಾಗಿ ಚಿಂತಿಸಬೇಕು. ಆ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹೇಳಿದರು.

ಈ ಸಂದರ್ಭ ಗೋಲ್ಡನ್ ಟಿ. ಸುರೇಶ್ ಅವರ ‘ಜಿಎಸ್‌ಎಫ್ ಫಿಲಂಸ್’ ಲಾಂಛನವನ್ನು ಕಾಸರಗೋಡು ಶ್ರೀ ಮಧೂರು ಕ್ಷೇತ್ರದ ಅರ್ಚಕ ಪಿ.ಕೆ. ಧನಂಜಯ ಅನಾವರಣ ಮಾಡಿದರು. ವೇದಿಕೆಯಲ್ಲಿ ಶ್ರೀರಂಗಪಟ್ಟಣ ಕನ್ನಡ ಸಾಹಿತ್ಯ ಪರಿಷತ್ ನಗರ ಘಟಕದ ಅಧ್ಯಕ್ಷೆ ಎನ್. ಸರಸ್ವತಿ, ನಿವೃತ್ತ ಮುಖ್ಯ ಶಿಕ್ಷಕ .ಯೋಗೇಂದ್ರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೆ.ಆರ್. ಪೇಟೆ ತಾಲೂಕು ಸಂಘಟನಾ ಕಾರ್ಯದರ್ಶಿ ಬಿ.ಎಸ್. ಮಂಜು, ಕೆಎಂಎಫ್ ಅಧಿಕಾರಿ ಪೂರ್ಣಚಂದ್ರ ತೇಜಸ್ವಿ, ಜ್ಯೋತಿಷಿ ಎಂ.ಎಲ್. ರಮೇಶ್ ಸ್ಥಪತಿ, ಮೆಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್. ಬಾಲಕೃಷ್ಣ, ರೂಪದರ್ಶಿ ತನಿಷ್ಕಾ ಮೂರ್ತಿ, ಟ್ರಸ್ಟ್ ಅಧ್ಯಕ್ಷ ಎಚ್.ವಿ. ಪುಟ್ಟಸ್ವಾಮಿ ಇದ್ದರು.

ಪ್ರಶಸ್ತಿ ಪುರಸ್ಕೃತರು: ವಿವಿಧ ಕ್ಷೇತ್ರದಲ್ಲಿ ಸಾಧನೆ ತೋರಿದ ಪಿ.ಕೆ. ಧನಂಜಯ, ಎಸ್.ಜೆ. ಗಣೇಶ, ಎಂ. ಬಾಲಸ್ವಾಮಿ, ಎಂ.ಸಿ. ಕೋಮಲಾ, ಸೌಭಾಗ್ಯ ಸಿದ್ದರಾಜು, ಸಿ. ನಾರಾಯಣ, ಸುನೀತಾ ರಾಮಾಚಾರಿ, ಚಂದಗಾಲ ಶಂಕರ್, ಮಹೇಶ್, ಗಣೇಶ, ಬಿ.ಎಸ್. ಮಂಜುನಾಥ, ಎಂ.ಎಸ್. ಸುರೇಶ್, ಎಸ್.ಎಸ್. ಪ್ರಸನ್ನ, ಸೋಮಲತಾ, ನೇತ್ರಾವತಿ, ಕೆ.ಬಿ. ನಾಗರತ್ನಾ, ಜೆ. ತೇಜೋವತಿ, ಜಿ.ಎಸ್. ಮಂಜು, ಕೆ.ಬಿ. ಬಂಗಾರ, ಎಸ್.ಕೆ. ವಿಶ್ವನಾಥ, ಬಸಪ್ಪ, ಎಸ್,ಟಿ. ಸತೀಶ, ಎ.ಎನ್. ಮಹೇಶ್, ದೊಡ್ಡರಸಯ್ಯ, ಸುರೇಶ, ಸಿ. ಕಾಂತಾ, ಟಿ ರಾಜಪ್ಪ, ಎಂ.ಆರ್. ಸುರೇಶ್, ಕೆ.ಎಸ್. ಪಾಲಾಕ್ಷ, ಬಿ. ಜಯಪ್ಪ, ಕೆ. ಜ್ಯೋತಿ, ಡಿ.ಎನ್. ಪ್ರಕಾಶ, ಪಿ.ಕೆ. ದಿನೇಶ್, ಸಿ.ಕೆ. ನಟೇಶ, ಎಚ್.ಪಿ. ಸೋಮೇಗೌಡ, ಎ. ಜಯಶೀಲಾ, ಜೆ.ಜಿ. ಕುಬೇರ, ರುದ್ರೇಶ, ಎನ್.ಆರ್. ರಮೇಶ, ವಿನೋದಾ, ಎ.ಪಿ. ಅಣ್ಣಾಜಪ್ಪ, ಪಿ.ಡಿ. ಕಾಳೇಗೌಡ, ಜಿ.ಎಲ್. ಮಂಜುಳಾ, ನಂಜುಂಡ ಹಾಗೂ ಎ. ರವಿ ಅವರಿಗೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net