ಸುಬ್ರಹ್ಮಣ್ಯ ಶೌಚ ಗೃಹದಲ್ಲಿ ಬಂಧಿಯಾದ ಚಿರತೆ

IMG-20210203-WA0009
Published on

ಮಂಗಳೂರು: ಶ್ವಾನವನ್ನು ಅಟ್ಟಿಸಿಕೊಂಡು ಬಂದ ಚಿರತೆ ಶೌಚಗೃಹದಲ್ಲಿ ಬಂಧಿಯಾದ ಘಟನೆ ಸುಬ್ರಹ್ಮಣ್ಯ ಸಮೀಪ ಕೈಕಂಬದಲ್ಲಿ ನಡೆದಿದೆ. ಇಲ್ಲಿನ ವಿವಾಸಿ ರೇಗಪ್ಪ ಎಂಬವರ ಮನೆಯ ಶ್ವಾನವನ್ನು ಚಿರತೆ ಅಟ್ಟಿಸಿಕೊಂಡು ಬಂದಿದೆ. ಶ್ವಾನ ಚಿರತೆಯಿಂದ ತಪ್ಪಿಸಿಕೊಳ್ಳಲು ಶೌಚಗೃಹಕ್ಕೆ ನುಗ್ಗಿದೆ. ಈ ಸಂದರ್ಭದಲ್ಲಿ ಮನೆಯವರು ಶೌಚಗೃಹದ ಬಾಗಿಲು ಹಾಕಿದ್ದಾರೆ. ಈಗ ಶ್ವಾನ ಮತ್ತು ಚಿರತೆ ಶೌಚ ಗೃಹದಲ್ಲಿ ಬಂಧಿಯಾಗಿವೆ. ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net