ಸುಬ್ರಹ್ಮಣ್ಯ ದೇವಾಲಯದಲ್ಲಿ ವಿಶೇಷ ಪೂಜೆ

29sirsi1a
Published on

ಶಿರಸಿ: ನಾಗರ ಪಂಚಮಿ ಹಬ್ಬವನ್ನು ತಾಲೂಕಿನಾದ್ಯಂತ ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು. ಇಲ್ಲಿಯ ನೀಲೇಕಣಿ ಸುಬ್ರಹ್ಮಣ್ಯ ದೇವಾಲಯಕ್ಕೆ ಸಹಸ್ರಾರು ಜನ ಆಗಮಿಸಿ ಪೂಜೆ ಸಲ್ಲಿಸಿದರು. ಬೆಳಗ್ಗೆಯಿಂದಲೇ ದೇವಾಲಯದ ಮುಂದೆ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದರು. ಇಲ್ಲಿಯ ನಾಗರ ಕಲ್ಲಿಗೂಹಾಲೆರೆಯುವ ಮೂಲಕ ನಾಗಪ್ಪನ ಪೂಜೆ ನೆರವೇರಿಸಿದರು.

ಗ್ರಾಮೀಣ ಪ್ರದೇಶದಲ್ಲಿ ರೈತರು ತಮ್ಮ ತೋಟಗಳಲ್ಲಿರುವ ನಾಗರ ಕಲ್ಲಿಗೆ ಬಾಳೆ ಎಲೆ ಚಪ್ಪರವನ್ನು ನಿರ್ವಿುಸಿ, ಚಪ್ಪೆ ಹೋಳಿಗೆ, ಉಂಡೆಗಳನ್ನು ನೈವೇದ್ಯ ಮಾಡುವ ಮೂಲಕ ಪೂಜೆ ಸಲ್ಲಿಸಿದರು. ಮನೆಯ ಆವರಣದಲ್ಲಿ ಬೇಯಿಸಿದ ಹಲಸಿನ ಬೇಳೆ, ಹೊದ್ದಲು ಬೀರುವ ಸಂಪ್ರದಾಯ ಹಳ್ಳಿಗಳಲ್ಲಿದ್ದು, ಈ ಮೂಲಕ ನಾಗಪ್ಪನಲ್ಲಿ ಉಪಟಳ ನೀಡಬೇಡ ಎಂದು ಪ್ರಾರ್ಥಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net