ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಚುನಾವಣೆಯಲ್ಲಿ ಗೆದ್ದವರಿಗೆ ಮಾತ್ರ  ಸಚಿರಾಗುವ ಅವಕಾಶ ಇದೆ ಎಂದ ಡಿಸಿಎಂ ಅಶ್ವಥ್ ನಾರಾಯಣ

IMG_20200129_120433.JPG
Published on

ಹಾಸನ: ಎಚ್. ವಿಶ್ವನಾಥ್ ಅವರಿಗೆ ಮಂತ್ರಿಸ್ಥಾನ ಕೊಡಬೇಕು ಎನ್ನುವ ಒತ್ತಾಯ ಇದೆ, ಆದರೆ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಚುನಾವಣೆಯಲ್ಲಿ ಗೆದ್ದವರಿಗೆ ಮಾತ್ರ ಸಚಿರಾಗುವ ಅವಕಾಶ ಇದೆ ಎಂದು ಹೇಳಿದೆ ಎನ್ನುವ ಮೂಲಕ‌ ಡಿಸಿಎಂ ಅಶ್ವಥ್ ನಾರಾಯಣ ಎಚ್ವಿಗೆ ಸಚಿವ ಸ್ಥಾನ ಇಲ್ಲ ಎನ್ನುವ ಸೂಚನೆ ನೀಡಿದರು.

ಚನ್ನರಾಯಪಟ್ಟಣದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಹೆಲಿಪ್ಯಾಡ್ ನಲ್ಲಿ

ಸುದ್ದಿಗಾರರೊಂದಿಗೆ ಮಾತನಾಡಿದರು.

ಸಚಿವ ಸಂಪುಟ ವಿಸ್ತರಣೆಗೆ ಅರ್ಜೆಂಟ್ ಇಲ್ಲ, ಸಂಪುಟ ವಿಸ್ತರಣೆಯಾಗಲಿದೆ, ಅದರಲ್ಲಿ ಯಾವುದೇ ಗೊಂದಲ ಇಲ್ಲ. ಈ ವಿಚಾರದಲ್ಲಿ ಸಿಎಂಗೆ ಪರಮಾಧಿಕಾರ ಇದೆ ಎಂದರು.

ಆರ್‌.ಶಂಕರ್ ಗೆ ಒಳ್ಳೆಯದಾಗಲಿದೆ. ಪಕ್ಷಕ್ಕೆ ತ್ಯಾಗ ಮಾಡಿದವರಿಗೆ ಗೌರವ ಸಿಗಲಿದೆ. ಶ್ರೀರಾಮುಲುಗೆ ಡಿಸಿಎಂ ಸ್ಥಾನ ನೀಡುವ ವಿಚಾರವನ್ನು ಸಿಎಂ ತೀರ್ಮಾನ ಮಾಡಲಿದ್ದಾರೆ ಎಂದು ಹೇಳಿದರು.

ಪಕ್ಷ ಎಲ್ಲರಿಗೂ ಕೈ ಹಿಡಿಯುವ ಕೆಲಸ ಮಾಡಲಿದೆ. ಕಾನೂನು ಚೌಕಟ್ಟಿನ ಅಡಿಯಲ್ಲಿ ಸಿಎಂ ಕ್ರಮ ಕೈಗೊಳ್ಳಲಿದ್ದಾರೆ. ಇಂದೇ ಎಲ್ಲವನ್ನೂ ಹೇಳಲು ಆಗಲ್ಲ ಎಂದು ಹಾರಿಕೆ ಉತ್ತರ ನೀಡಿದರು.

ಹಾಸನ ಸರ್ಕಾರಿ ಮೆಡಿಕಲ್ ಕಾಲೇಜು ನಿರ್ದೇಶಕ ಸ್ಥಾನಕ್ಕೆ ಡಾ.ಬಿ.ಸಿ.ರವಿಕುಮಾರ್ ಮರು ನೇಮಕ ಮಾಡಿರುವ ಬಗ್ಗ ಪ್ರತಿಕ್ರಿಯಿಸಿದ ಸಚಿವರು, ಅವರು ಯಾವುದೇ ನಕಲಿ ದಾಖಲೆ ನೀಡಿಲ್ಲ ,ಹಾಗಾಗಿ ಪೂರ್ಣಾವಧಿ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net