ಸುನಿತಾ ವಿಲಿಯನ್ಸ್ ಆಗಮನಕ್ಕೆ ಸಂಭ್ರಮ

19Rajesh9
Published on

ಚಾಮರಾಜನಗರ: ಬಾಹ್ಯಾಕಾಶದಿಂದ ಭಾರತ ಮೂಲದ ಗಗನಯಾನಿ ಸುನಿತಾ ವಿಲಿಯಮ್ಸ್ ಭೂಮಿಗೆ ಮರಳಿದ ಹಿನ್ನೆಲೆಯಲ್ಲಿ ನಗರದ ಜೈ ಹಿಂದ್ ಪ್ರತಿಷ್ಠಾನ ಮತ್ತು ಋಗ್ವೇದಿ ಯೂತ್ ಕ್ಲಬ್ ವತಿಯಿಂದ ಬುಧವಾರ ರಾಷ್ಟ್ರಧ್ವಜ ಪ್ರದರ್ಶಿಸಿ, ಸಿಹಿ ಹಂಚಿ ಸಂಭ್ರಮಿಸಲಾಯಿತು.

ಈ ವೇಳೆ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಋಗ್ವೇದಿ ಮಾತನಾಡಿ, ಸುನಿತಾ ವಿಲಿಯಮ್ಸ್ ಅವರು ಸುಮಾರು 9 ತಿಂಗಳ ಕಾಲ ಬಾಹ್ಯಾಕಾಶದಲ್ಲಿ ಇರುವ ಮೂಲಕ ಧೈರ್ಯ, ಆತ್ಮಸ್ಥೈರ್ಯ, ಸಾಹಸ ಹಾಗೂ ಮಹಿಳಾ ಶಕ್ತಿಗೆ ಪ್ರತೀಕವಾಗಿ ವಿಶ್ವಕ್ಕೆ ಭಾರತದ ಗೌರವವನ್ನು ಹೆಚ್ಚಿಸಿದ್ದಾರೆ ಎಂದರು.

ಪ್ರತಿಷ್ಠಾನದ ನಿರ್ದೇಶಕಿ ಮಾಲ ರವಿ ಮಾತನಾಡಿ, ಸುನಿತಾ ವಿಲಿಯಮ್ಸ್ ಅವರ ಧೈರ್ಯಕ್ಕೆ ಸರಿಸಾಟಿ ಯಾರು ಇಲ್ಲ. ಮಹಿಳೆ ತಮ್ಮ ವಿಶೇಷ ಸದೃಢವಾದ ಚೈತನ್ಯ ಶಕ್ತಿಯಿಂದ ಎಲ್ಲ ಸಂಕಷ್ಟಗಳನ್ನು ಎದುರಿಸಿ 9 ತಿಂಗಳುಗಳ ನಂತರ ಭೂಮಿಗೆ ಆಗಮಿಸಿರುವುದು ಬಹಳ ಸಂತೋಷವನ್ನುಂಟು ಮಾಡಿದೆ ಎಂದರು. ವತ್ಸಲ ರಾಜಗೋಪಾಲ್ , ಕುಸುಮ ಋಗ್ವೇದಿ, ನಾಗಶ್ರೀ, ಶ್ರಾವ್ಯ ಋಗ್ವೇದಿ, ರವಿ, ವಿನೋದ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net