ಸುಧಾಶಿವರಾಮೇಗೌಡರ ಪರ ಪುತ್ರಿ ಮತಯಾಚನೆ

06 NMG 05
ನಾಗಮಂಗಲ ತಾಲೂಕಿನ ಬೆಳ್ಳೂರು ಪಟ್ಟಣದ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಸುಧಾಶಿವರಾಮೇಗೌಡ ಪರವಾಗಿ ಪುತ್ರಿ ಭವ್ಯಾಗೌಡ ಮತಪ್ರಚಾರ ನಡೆಸಿದರು.
Published on

ನಾಗಮಂಗಲ: ತಾಲೂಕಿನ ಬೆಳ್ಳೂರು ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಸುಧಾಶಿವರಾಮೇಗೌಡರ ಪರ ಪುತ್ರಿ ಭವ್ಯಾಗೌಡ ಮತಯಾಚಿಸಿದರು.

ನಮ್ಮ ತಂದೆ ಎಲ್.ಆರ್.ಶಿವರಾಮೇಗೌಡ ಎಂದೂ ದ್ವೇಷದ ರಾಜಕಾರಣ ಮಾಡಿ ಯಾರಿಗೂ ತೊಂದರೆ ನೀಡಿಲ್ಲ. ಎಲ್ಲರನ್ನೂ ವಿಶ್ವಾಸದಿಂದ, ಪ್ರೀತಿಯಿಂದ ಕಾಣುವ ಜತೆಗೆ ನಮ್ಮ ಕುಟುಂಬದವರಂತೆ ಕಾರ್ಯಕರ್ತರ ಕಷ್ಟಸುಖಗಳಿಗೆ ಸ್ಪಂದಿಸಿದ್ದಾರೆ. ಈ ಬಾರಿ ನಮ್ಮ ತಾಯಿಯನ್ನು ಬಿಜೆಪಿಯಂತಹ ದೊಡ್ಡ ಪಕ್ಷ ಗುರುತಿಸಿ ಟಿಕೆಟ್ ನೀಡಿರುವುದು ನಮ್ಮ ಕುಟುಂಬಕ್ಕಿಂತ ತಾಲೂಕಿನ ಜನರಿಗೆ ಹೆಚ್ಚು ಸಂತೋಷವಾಗಿದೆ. ಈ ಬಾರಿ ಅವರನ್ನು ಗೆಲ್ಲಿಸುವ ಮೂಲಕ ಇತಿಹಾಸ ನಿರ್ಮಿಸುವ ಗುರಿ ಪ್ರತಿಯೊಬ್ಬರದ್ದಾಗಬೇಕು ಎಂದರು.

ಬಿಜೆಪಿ ಎಂದೂ ಕೂಡ ಮುಸ್ಲಿಂ ವಿರೋಧಿ ಪಕ್ಷವಲ್ಲ. ಆದರೆ ಕಾಂಗ್ರೆಸ್ ಪಕ್ಷದವರು ಇಲ್ಲಸಲ್ಲದ ಅಪಪ್ರಚಾರ ಮಾಡುವ ಮೂಲಕ ಮುಸ್ಲಿಂ ಸಮುದಾಯವನ್ನು ಮತಬ್ಯಾಂಕ್ ಆಗಿ ಮಾಡಿಕೊಂಡಿದೆ. ಈ ಬಾರಿ ನಮ್ಮ ತಾಯಿ ಹಾಗೂ ನಮ್ಮ ತಂದೆಯ ಕೆಲಸ ಮೆಚ್ಚಿ ಅಪಾರ ಸಂಖ್ಯೆಯ ಮುಸ್ಲಿಮರು ಕೂಡ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸುತ್ತಿರುವುದು ಸಂತೋಷದ ವಿಚಾರವಾಗಿದೆ. ಈ ಬಾರಿ ಬಿಜೆಪಿಗೆ ಮತ ನೀಡಿ ಗೆಲ್ಲಿಸುವ ಮೂಲಕ ತಾಲೂಕಿನ ಸ್ವಾಭಿಮಾನ ಹಾಗೂ ಶಿವರಾಮೇಗೌಡರ ಗೌರವವನ್ನು ಹೆಚ್ಚಿಸುವಂತೆ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net