

ನೇಸರಗಿ: ರೆತರು ಆರ್ಥಿಕವಾಗಿ ಸದೃಢರಾಗಬೇಕಾದರೆ ಸೂಕ್ತ ತಳಿಗಳನ್ನು ಆಯ್ಕೆ ಮಾಡಿಕೊಂಡು ಸುಧಾರಿತ ಬೇಸಾಯ ಕ್ರಮ ಅಳವಡಿಸಿಕೊಳ್ಳಬೇಕು ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿ ಡಾ.ಜಿ.ಕೆ. ನಾಯ್ಕ ಹೇಳಿದರು.
ಸಮೀಪದ ಹಣ್ಣಿಕೇರಿ ಗ್ರಾಮದ ಸಿದ್ಧೇಶ್ವರ ಸಭಾಭವನದಲ್ಲಿ ಎಡಿಎಂ ಅಗ್ರೋ ಇಂಡ್ಸ್ಟ್ರೀಸ್ ಇಂಡಿಯಾ ಪೆ.ಲಿ. ಹಾಗೂ ಬಾಯರ್ ಕ್ರಾಪ್ ಸೆನ್ಸ್ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ರೈತರಿಗಾಗಿ ಸೋಮವಾರ ಹಮ್ಮಿಕೊಂಡಿದ್ದ ತರಬೇತಿ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಸೋಯಾಬೀನ್ ರೆತ ಸ್ನೇಹಿ ಬೆಳೆಯಾಗಿದ್ದು, ಉತ್ತಮ ಇಳುವರಿ ಪಡೆಯಲು ಕೀಟ ರೋಗನಿರೋಧಕ ಶಕ್ತಿಯುಳ್ಳ ತಳಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರು.
ಬೈಲಹೊಂಗಲ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಬಸವರಾಜ ದಳವಾಯಿ ಮಾತನಾಡಿ, ಈ ವರ್ಷ ತಾಲೂಕಿನಲ್ಲಿ ಹೆಚ್ಚು ಮಳೆಯಾಗಿರುವುದರಿಂದ ಸೋಯಾಬೀನ್ ರೋಗಕ್ಕೀಡಾಗುವ ಸಾಧ್ಯತೆ ಹೆಚ್ಚಿದ್ದು, ರೆತರು ಸೂಕ್ತ ನಿರ್ವಹಣಾ ಕ್ರಮ ಕೈಗೊಳ್ಳಬೇಕು ಎಂದರು.
ಎಡಿಎಂ ಸಹಾಯಕ ವ್ಯವಸ್ಥಾಪಕಿ ರತಾ ಕೆ.ಆರ್., ಗ್ರಾಪಂ ಅಧ್ಯೆ ರೂಪಾ ಬಳಗನ್ನವರ, ಪಿಕೆಪಿಎಸ್ ಅಧ್ಯ ಅಶೋಕ ಹಾಲಪ್ಪನವರ, ಪ್ರಗತಿಪರ ರೆತ ಸಿದ್ದರಾಯಗೌಡ ಪಾಟೀಲ, ರವಿ ಅಂಬರಶೆಟ್ಟಿ , ಬಸವರಾಜ ಮಡಿವಾಳರ, ಹಣ್ಣಿಕೇರಿ, ಯರಗುದ್ದಿ, ಜಕನಾಯಕನಕೊಪ್ಪ ಹಾಗೂ ಬೆರನಟ್ಟಿ ಗ್ರಾಮಗಳ ರೆತರಿದ್ದರು.