ಸುಧಾರಿತ ತಂತ್ರಜ್ಞಾನ ಅಳವಡಿಸಿಕೊಳ್ಳುವುರಿಂದ ರೈತರ ಆರ್ಥಿಕತೆ ಸದೃಢ; ಡಾ.ಕುಮಾರಸ್ವಾಮಿ

ಸುಧಾರಿತ ತಂತ್ರಜ್ಞಾನ ಅಳವಡಿಸಿಕೊಳ್ಳುವುರಿಂದ ರೈತರ ಆರ್ಥಿಕತೆ ಸದೃಢ; ಡಾ.ಕುಮಾರಸ್ವಾಮಿ
Published on

ಅರಸೀಕೆರೆ: ತಾಲೂಕಿನ ಜ್ಯೋತಿ ಮಲ್ಲಾಪುರ ಗ್ರಾಮದಲ್ಲಿ ಕಾರೇಕೆರೆ ಕೃಷಿ ವಿಜ್ಞಾನ ಮಹಾವಿದ್ಯಾಲಯದ ಅಂತಿಮ ವರ್ಷದ ಜೈವಿಕ ತಂತ್ರಜ್ಞಾನದ ವಿದ್ಯಾರ್ಥಿಗಳು ರೈತರಿಗೆ ಅಂಗಾಂಶ ಬಾಳೆ ಬೆಳೆ ಕುರಿತು ಅರಿವು ಮೂಡಿಸಿದರು.

ಸಂಪನ್ಮೂಲ ವ್ಯಕ್ತಿ ಡಾ.ಕುಮಾರಸ್ವಾಮಿ ಮಾತನಾಡಿ, ಸುಧಾರಿತ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುರಿಂದ ರೈತರು ಆರ್ಥಿಕ ಸದೃಢತೆ ಸಾಧಿಸಲು ಸಾಧ್ಯವಿದೆ.ಅಂಗಾಂಶ ಕೃಷಿಯಿಂದ ಹೆಚ್ಚಿನ ಇಳುವರಿ ಪಡೆಯಬಹುದಾಗಿದೆ.ಅಲ್ಲದೇ ರೋಗದಿಂದ ಬೆಳೆ ಸಂರಕ್ಷಿಸಲು ಉಪಯುಕ್ತವಾಗಿದ್ದು ರೈತರು ಇದರ ಪ್ರಯೋಜನ ಪಡೆಯಬೇಕು ಎಂದು ಕಿವಿಮಾತು ಹೇಳಿದರು.

ಪ್ರಾಧ್ಯಾಪಕರಾದ ಡಾ.ಬಿ.ರೇಖಾ ಬಾಳೆ ಬೆಳೆ ಕುರಿತ ಸಂಶಯಗಳನ್ನು ನಿವಾರಿಸಿದರು. ಮುಖಂಡರಾದ ಪರಮಶಿವಯ್ಯ, ಮಂಜುನಾಥ್, ಚಿದಾನಂದ್, ನಂಜೇಶ್ ಇನ್ನಿತರರಿದ್ದರು.

ಬ್ಯಾನರ್ ಹಾಗೂ ಭಿತ್ತಿ ಪತ್ರ ಹಿಡಿದು ಜಾಗೃತಿ ಮೂಡಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net