

ಹುಬ್ಬಳ್ಳಿ: ಕರೊನಾ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಚಿತ್ರ ಮಂದಿರಗಳು ಸರ್ಕಾರದ ಅನುಮತಿಯೊಂದಿಗೆ ತೆರೆಯಲಾರಂಭಿಸಿವೆ. ನಗರದ ಸುಧಾ ಚಿತ್ರಮಂದಿರ ಕೂಡ ನ. 5ರಿಂದ ಮರು ಆರಂಭವಾಗಲಿದ್ದು, ನಿತ್ಯ ನಾಲ್ಕು ಪ್ರದರ್ಶನ ನೀಡಲಿದೆ.
‘ಸೂರಜ್ಪೇ ಮಂಗಲ ಭಾರಿ’ ಹಿಂದಿ ಚಲನಚಿತ್ರ ಪ್ರದರ್ಶನಗೊಳ್ಳಲಿದೆ. ಪ್ರತಿಯೊಬ್ಬ ವೀಕ್ಷಕರು ಮಾಸ್ಕ್ ಧರಿಸಿಯೇ ಬರಬೇಕು. ಚಿತ್ರ ಮಂದಿರ ಪ್ರವೇಶಕ್ಕೆ ಮುನ್ನ ತಾಪಮಾನ ಪರೀಕ್ಷಿಸಲಾಗುವುದು. ಸ್ಯಾನಿಟೈಸರ್ ಬಳಕೆ ಹಾಗೂ ಪರಸ್ಪರ ಅಂತರ ಕಾಯ್ದುಕೊಂಡು ಸಿನಿಮಾ ನೋಡಲು ಅವಕಾಶ ಕಲ್ಪಿಸಲಾಗಿದೆ. ಒಂದು ಸೀಟ್ ಬಿಟ್ಟು ಇನ್ನೊಂದು ಸೀಟ್ನಲ್ಲಿ ಕುಳಿತುಕೊಳ್ಳಲು ಟಿಕೆಟ್ನಲ್ಲಿಯೇ ನೋಂದಾಯಿಸಲಾಗಿರುತ್ತದೆ. 10 ತಿಂಗಳಿಂದ ಚಲನಚಿತ್ರ ಪ್ರದರ್ಶನವಿಲ್ಲದೇ ಖಾಲಿ ಕುಳಿತುಕೊಳ್ಳಲಾಗಿತ್ತು. ದೀಪಾವಳಿ ಹಿನ್ನೆಲೆಯಲ್ಲಿ ಪ್ರದರ್ಶನ ನಡೆಸಲಾಗುತ್ತಿದೆ ಎಂದು ಸುಧಾ ಚಿತ್ರಮಂದಿರದ ಮಾಲೀಕ ಕಿಶೋರ ರಾಯ್ಕರ್ ತಿಳಿಸಿದ್ದಾರೆ.