ಸುಧಾ ಅಧ್ಯಕ್ಷೆ, ಯಲ್ಲಾಲಿಂಗ ಉಪಾಧ್ಯಕ್ಷ

17-11jvg01
Published on

ಜೇವರ್ಗಿ: ಜೇವರ್ಗಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿ ಸುಧಾ ಹೊಸಮನಿ, ಉಪಾಧ್ಯಕ್ಷರಾಗಿ ಯಲ್ಲಾಲಿಂಗ ಅವರಾದಿ ಅವಿರೋಧವಾಗಿ ಮಂಗಳವಾರ ಆಯ್ಕೆಯಾದರು.
11 ಸದಸ್ಯರ ಬಲ ಹೊಂದಿದ ಸಹಕಾರ ಸಂಘದಲ್ಲಿ ಜೆಡಿಎಸ್-8, ಬಿಜೆಪಿ-2, ಕಾಂಗ್ರೆಸ್-1 ಸದಸ್ಯರ ಬಲ ಹೊಂದಿದೆ. ಮಂಗಳವಾರದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತರಾದ ಸುಧಾ ಹಾಗೂ ಯಲ್ಲಾಲಿಂಗ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು.
ಜೆಡಿಎಸ್ ಬೆಂಬಲಿತರು ಸಂಘದ ಅಧ್ಯಕ್ಷ- ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುತ್ತಿದ್ದಂತೆ ಮುಖಂಡರು, ಕಾರ್ಯ ಕರ್ತರು ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಜಿಪಂ ಸದಸ್ಯೆ ದೇವಕ್ಕೆಮ್ಮ ಹಿರೇಮಠ, ಚನ್ನಮಲ್ಲಯ್ಯ ಹಿರೇಮಠ, ಮೈಬೂಬ್ಸಾಬ್ ಇನಾಮದಾರ, ಬಸವರಾಜ ಖಾನಗೌಡ, ಸದಾನಂದ ಪಾಟೀಲ್, ಚಂದ್ರಶೇಖರ ಮಲ್ಲಾಬಾದ್, ಶಿವಾನಂದ ದ್ಯಾಮಗೊಂಡ, ಭಗವಂತ್ರಾಯಗೌಡ ಅಂಕಲಗಿ, ವಿನೋದ ಕುಲಕಣರ್ಿ, ವಿಜಯಕುಮಾರ ನರಿಬೋಳ, ಸಿದ್ದಲಿಂಗಯ್ಯ ದೇಸಣಗಿ, ಪಂಚಯ್ಯ ಸ್ವಾಮಿ ಸ್ಥಾವರಮಠ, ಮಲ್ಲು ತಂಡುಲಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net