ಸುಧರ್ಮಾ ವಾರ್ಷಿಕ ವಿಶೇಷ ಸಂಚಿಕೆ ಬಿಡುಗಡೆ

Book
Published on

ಸುಧರ್ಮಾ ಸಂಸ್ಕೃತ ಪತ್ರಿಕೆಯ 56ನೇ ವಾರ್ಷಿಕೋತ್ಸವ ಪ್ರಯುಕ್ತ ಅ.5ರಂದು ಲೇಖಕ ಕೂಡ್ಲಿ ಗುರುರಾಜ್ ಬರೆದಿರುವ, ಎಸ್.ನಟರಾಜ್ ಅನುವಾದಿಸಿರುವ ದಿ ಸಾಗ ಆ್ ಸುಧರ್ಮಾ ಪುಸ್ತಕ ಹಾಗೂ ಸುಧರ್ಮಾ ವಾರ್ಷಿಕ ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಕೃಷ್ಣಮೂರ್ತಿಪುರಂನಲ್ಲಿರುವ ಬಿ.ಎಸ್.ಎಸ್.ವಿದ್ಯೋದಯ ಶಾಲೆಯ ಆವರಣದಲ್ಲಿ ಅಂದು ಬೆಳಗ್ಗೆ 10.30 ನಡೆಯುವ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಡಾ.ವಿಜಯ ಸಂಕೇಶ್ವರ ಅವರು ಪುಸ್ತಕ ಲೋಕಾರ್ಪಣೆಗೊಳಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಟಿ.ಎಸ್.ಶ್ರೀವತ್ಸ, ಎಂಎಲ್‌ಸಿ ಕೆ.ಶಿವಕುಮಾರ್, ಸ್ಥಾಯಿ.ಇನ್ ಸಂಸ್ಥಾಪಕ ಸಮಷ್ಟಿ ಗುಬ್ಬಿ, ಸುಧರ್ಮಾ ಸಂಸ್ಕೃತ ದಿನ ಪತ್ರಿಕೆಯ ಗೌರವ ಸಂಪಾದಕ ಡಾ.ವಿ.ಡಿ.ಹೆಗಡೆ ಭಾಗವಹಿಸಲಿದ್ದಾರೆ.

ಸಮ್ಯಕ್ ಪ್ರತಿಷ್ಠಾನದ ಅಧ್ಯಕ್ಷ ವಿದ್ವಾನ್ ಎಂ.ಆರ್.ಸತೀಶ್ ಅವರನ್ನು ಸನ್ಮಾನಿಸಲಾಗುವುದು. ಮಧ್ಯಾಹ್ನ 1ಕ್ಕೆ ಬಹುಮಾನ ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ಮಾಡಲಾಗುವುದು. ಸಂಜೆ 4.15ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ನಾಗರಾಜ ವಿರಚಿತ ‘ಸುವಚನಶತಕಮ್’, ‘ಶಿಖರಿಣೀಶತಕಮ್’, ಡಾ.ಟಿ.ವಿ.ಸತ್ಯನಾರಾಯಣ ಅವರ ‘ನವರಾತ್ರಿ ದುರ್ಗಾ ವೈಭವ’ ಗ್ರಂಥಗಳನ್ನು ಕರ್ನಾಟಕ ಸಂಸ್ಕೃತ ವಿವಿ ಕುಲಪತಿ ಡಾ.ಅಹಲ್ಯಾ ಶರ್ಮಾ ಲೋಕಾರ್ಪಣೆ ಮಾಡುವರು. ಮುಖ್ಯ ಅತಿಥಿಗಳಾಗಿ ಪ್ರಮತಿ ಶಾಲಾ ಸಮೂಹದ ಕಾರ್ಯದರ್ಶಿ ಎಚ್.ವಿ.ರಾಜೀವ್, ವಿಜಯವಿಠಲ ವಿದ್ಯಾಸಂಸ್ಥೆ ಅಧ್ಯಕ್ಷ ಆರ್.ವಾಸುದೇವ ಭಟ್ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net