ಸುತ್ತೂರು ಶ್ರೀಕ್ಷೇತ್ರದಲ್ಲೂ ವೈಭವ

press1
Published on


ಸುತ್ತೂರು: ಶಿವದೀಪೋತ್ಸವದ ಅಂಗವಾಗಿ ಸುತ್ತೂರು ಕ್ಷೇತ್ರದ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಕರ್ತೃ ಗದ್ದುಗೆ, ಶ್ರೀ ಸೋಮೇಶ್ವರ, ಶ್ರೀಮಹದೇಶ್ವರ, ಶ್ರೀ ವೀರಭದ್ರೇಶ್ವರ ಮತ್ತು ಶ್ರೀ ನಾರಾಯಣಸ್ವಾಮಿ ದೇವಾಲಯಗಳಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ಮಂಗಳವಾರ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.

ಜನವರಿ 18ರಿಂದ 23ರವರೆಗೆ ನಡೆಯಲಿರುವ ಆದಿಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿಗಳ ಜಾತ್ರಾ ಮಹೋತ್ಸವದ ಪ್ರಚಾರ ರಥಕ್ಕೆ ಚಾಲನೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಸಾಹಿತಿಗಳು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪ್ರೊ.ಎಂ.ಕೃಷ್ಣೇಗೌಡ ಅವರು ಬೆಳಕಿನ ಉತ್ಸವ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಹೊಸಮಠ, ಹುಲಿಯೂರುದುರ್ಗ, ಚಿಕ್ಕತುಪ್ಪೂರು, ಚುಂಚನಹಳ್ಳಿ, ನವಿಲೂರು, ಹಾಡ್ಯ, ಹೊನ್ನಲಗೆರೆ, ಕಳ್ಳಿಪುರ, ಮಾದಹಳ್ಳಿ, ಮಾಡ್ರಳ್ಳಿ, ಹಲ್ಲರೆ, ಬೆನಕನಹಳ್ಳಿ ಭಿಕ್ಷದ ಮಠ, ರಾಗಿಬೊಮ್ಮನಹಳ್ಳಿ, ಹೆಡಿಯಾಲ, ಆಲತ್ತೂರು, ಮಾದಾಪುರ ಮಠಗಳ ಶ್ರೀಗಳು, ಡಾ.ಪದ್ಮಾಶೇಖರ್, ಪ್ರೊ.ಶಿವರಾಜಪ್ಪ, ಎಸ್.ಪಿ.ಮಂಜುನಾಥ್, ಎಸ್.ಶಿವಕುಮಾರಸ್ವಾಮಿ, ಪ್ರೊ.ಶಿವರಾಜಪ್ಪ ಇತರರು ಭಾಗವಹಿಸಿದ್ದರು ಎಂದು ಸುತ್ತೂರು ಶ್ರೀಕ್ಷೇತ್ರದ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net