

ಮೈಸೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸುತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ಸುತ್ತೂರಿನಲ್ಲಿ ಆಯೋಜಿಸಿದ್ದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಸುತ್ತೂರು ಜೆಎಸ್‌ಎಸ್ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾಪಟುಗಳು ಆಟ-ಮೇಲಾಟಗಳಲ್ಲಿ ಭಾಗವಹಿಸಿ ಸಮಗ್ರ ಪ್ರಶಸ್ತಿ ಪಡೆದಿದ್ದಾರೆ.
ಬಾಲಕರ ವಿಭಾಗದ ಖೋಖೋ, ಕಬಡ್ಡಿ, ಥ್ರೋಬಾಲ್ ಪಂದ್ಯಾವಳಿಗಳಲ್ಲಿ ಪ್ರಥಮ, ವಾಲಿಬಾಲ್ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಬಾಲಕಿಯ ವಿಭಾಗದ ಖೋಖೋ ವಾಲಿಬಾಲ್, ಥ್ರೋಬಾಲ್ ಪಂದ್ಯಾವಳಿಗಳಲ್ಲಿ ಪ್ರಥಮ ಸ್ಥಾನ ಮತ್ತು ಕಬಡ್ಡಿ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಬಾಲಕರ ಅಥ್ಲೆಟಿಕ್ಸ್ ವಿಭಾಗದಲ್ಲಿ ಬಸವರಾಜ್ ಕಾಂತೇಶ್ ಸುಣ್ಣದಕೊಪ್ಪ -ಎತ್ತರ ಜಿಗಿತ, 600 ಮೀ ಓಟ, ಹಾಗೂ 400 ಮೀ ಓಟದಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ವೈಯಕ್ತಿಕ ಚಾಂಪಿಯನ್ ಆಗಿದ್ದಾನೆ.
ಬಾಲಕರ ವಿಭಾಗದಲ್ಲಿ ಶರತ್ ಪ್ರಸಾದ್ 100 ಮೀಟರ್ ಓಟದಲ್ಲಿ ದ್ವಿತೀಯ, ಪರಮೇಶ್ 200 ಮೀಟರ್ ಓಟದಲ್ಲಿ ಪ್ರಥಮ, ವಿಜಯ್ ಕುಮಾರ್ ಉದ್ದಜಿಗಿತದಲ್ಲಿ ಪ್ರಥಮ, ಮಲ್ಲಿಕಾರ್ಜುನ್ ಗುಂಡು ಎಸೆತದಲ್ಲಿ ಪ್ರಥಮ, ದಿಗಂತ್ ತಟ್ಟೆ ಎಸೆತದಲ್ಲಿ ಪ್ರಥಮ, ವಿಶ್ವನಾಥ್ ಮತ್ತು ತಂಡ 400* 100 ಮೀ ರಿಲೇಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ಅಕ್ಷತಾ 100 ಮೀ.ಓಟದಲ್ಲಿ ಪ್ರಥಮ, 200 ಮೀ.ಓಟದಲ್ಲಿ ಪ್ರಥಮ, ಲಕ್ಷ್ಮೀ 400 ಮೀ. ಓಟದಲ್ಲಿ ದ್ವಿತೀಯ, ಪವಿತ್ರ 600 ಮೀ. ಓಟದಲ್ಲಿ ಪ್ರಥಮ, ಉದ್ದ ಜಿಗಿತದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಯುಜನ್ಯಾ -ಎತ್ತರ ಜಿಗಿತದಲ್ಲಿ ಪ್ರಥಮ, ಚಾರಿಟಿ- ಗುಂಡು ಎಸೆತದಲ್ಲಿ ಪ್ರಥಮ ಮತ್ತು ತಟ್ಟೆ ಎಸೆತದಲ್ಲಿ ಪ್ರಥಮ, ಲಕ್ಷ್ಮೀ ಮತ್ತು ತಂಡ- 400*100 ಮೀ ರಿಲೇಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.