ಸುತ್ತೂರು ಜಾತ್ರೆ ಪ್ರಚಾರ ರಥಕ್ಕೆ ಸ್ವಾಗತ

Published on

ಕೊಳ್ಳೇಗಾಲ: ಶ್ರೀ ಕ್ಷೇತ್ರ ಸುತ್ತೂರಿನಲ್ಲಿ ಜ.25 ರಿಂದ 30 ರವರೆಗೆ ಜಾತ್ರೆ ನಡೆಯಲಿದ್ದು, ತಾಲೂಕಿನ ಕೊಂಗರಗಳ್ಳಿ ಗ್ರಾಮಕ್ಕೆ ಆಗಮಿಸಿದ ಪ್ರಚಾರ ರಥವನ್ನು ಮಾಜಿ ಶಾಸಕಿ ಪರಿಮಳಾ ನಾಗಪ್ಪ ಬರಮಾಡಿಕೊಂಡರು.

ನಂತರ ರಥಯಾತ್ರೆಗೆ ಪುಷ್ಪನಮನ ಸಲ್ಲಿದ ಬಳಿಕ ಮಾಜಿ ಶಾಸಕಿ ಪರಿಮಳಾ ನಾಗಪ್ಪ ಹಾಗೂ ಮುಖಂಡರು ಕೊಳ್ಳೇಗಾಲ ಪಟ್ಟಣಕ್ಕೆ ಬೀಳ್ಕೊಟ್ಟರು. ಮಾರ್ಗಮಧ್ಯೆ ವಿವಿಧ ಗ್ರಾಮಗಳಲ್ಲಿ ರಥಯಾತ್ರೆಯನ್ನು ವಿವಿಧ ಕಲಾತಂಡಗಳೊಡನೆ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ತಾಲೂಕು ನಿರ್ದೇಶಕ ಬೂದಿತಿಟ್ಟು ಶಿವಕುಮಾರ್, ಮಾಜಿ ಅಧ್ಯಕ್ಷ ಮಹದೇವ ಪ್ರಸಾದ್, ತಾಪಂ ಮಾಜಿ ಸದಸ್ಯ ನಟೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net