ಸುತ್ತೂರು ಜಾತ್ರೆ  ಪ್ರಚಾರ ರಥಕ್ಕೆ ಅದ್ಧೂರಿ ಸ್ವಾಗತ

16rajesh3
Published on
ಚಾಮರಾಜನಗರ: ಸುತ್ತೂರು ಶ್ರೀಕ್ಷೇತ್ರದಲ್ಲಿ ಜ.26ರಿಂದ 31ರ ವರೆಗೆ ನಡೆಯಲಿರುವ ಶ್ರೀ ಮತ್ಸೂತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಸಂಸ್ಥಾಪನಾಚಾರ್ಯ ಆದಿ ಜಗದ್ಗುರು ಶ್ರೀ ಶಿವರಾತ್ರಿಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದ ಪ್ರಚಾರ ರಥವು ಗುರುವಾರ ಚಾಮರಾಜನಗರಕ್ಕೆ ಆಗಮಿಸಿತು.
ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನ ಅವರಣದಲ್ಲಿ  ಪ್ರಚಾರ ರಥಕ್ಕೆ ಶಾಸಕ ಸಿ. ಪುಟ್ಟರಂಗಶೆಟ್ಟಿ  ಪೂಜೆ ಸಲ್ಲಿಸಿ ಚಾಲನೆ ನೀಡಿದರು.  ಬಳಿಕ ಮಾತನಾಡಿದ ಅವರು, ಸುತ್ತೂರು ಜಾತ್ರೆಯು  ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಜನರಿಗೆ ಒಂದು ಹಬ್ಬವೇ ಆಗಿದೆ. ಏಳು ದಿನಗಳ ಕಾಲ ವೈಭವ ಹಾಗೂ ಬಹಳ ವ್ಯವಸ್ಥಿತವಾಗಿ ನಡೆಯುತ್ತಿದೆ. ಜ. 26ರಿಂದ ಆರಂಭಗೊಂಡು  ಜ.31 ರವರಿಗೆ ನಡೆಯಲಿರುವ ಜಾತ್ರೆಯಲ್ಲಿ ದನಗಲ ಪರಿಷೆ, ಗ್ರಾಮೀಣ ಕೂಟ, ಭಜನಾ, ರಥೋತ್ಸವ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ನಾಟಕಗಳ ಪ್ರದರ್ಶನ ಇರುತ್ತದೆ. ನಾಡಿನ ಗಣ್ಯರು, ಸ್ವಾಮೀಜಿಗಳು ಜಾತ್ರೆಯಲ್ಲಿ ಭಾಗವಹಿಸುವ ಮೂಲಕ ಹೆಚ್ಚಿನ ಮೆರುಗು ಬರುತ್ತದೆ. ಜಾತ್ರೆ ಆಗಮಿಸುವ ಎಲ್ಲಾ ಭಕ್ತರಿಗೂ ರುಚಿಕರ ಪ್ರಸಾದ ವ್ಯವಸ್ಥೆಯು  ಅಭೂತವಾಗಿರುತ್ತದೆ. ಇದೆಲ್ಲವು ಶ್ರೀಗಳ ಅಶೀರ್ವಾದಗಳಿಂದ ನಡೆಯುತ್ತದೆ ಎಂದರು.
ನಗರ ಮಠದ ಶ್ರೀ ಚನ್ನಬಸವಸ್ವಾಮೀಜಿ ಮಾತನಾಡಿ, ದಕ್ಷಿಣ ಕರ್ನಾಟದಕ  ಕುಂಭಮೇಳದ ಮಾದರಿಯಲ್ಲಿ ಶ್ರೀ ಸುತ್ತೂರು ಜಾತ್ರೆ  ನಡೆಯುತ್ತದೆ. ಶರಣರ ಸಂಗಮ ಸಹ ಆಗಿದೆ.  ಎಲ್ಲಾ ವರ್ಗದ ಜನರು ಸಹ ಜಾತ್ರೆಯಲ್ಲಿ ಭಾಗವಹಿಸಿ ಸಂತಸದಿಂದ ನೋಡುವ ಭಾಗ್ಯವನ್ನು ಶ್ರೀಗಳು ಕರುಣಿಸಿದ್ದಾರೆ. ಜಿಲ್ಲೆಯ ಎಲ್ಲರು ಸುತ್ತೂರು ಜಾತ್ರೆಯಲ್ಲಿ ಭಾಗವವಹಿಸಿ ಎಂದರು.
ಕಾರ್ಯಕ್ರಮದಲ್ಲಿ  ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ, ನಗರಸಭಾ ಉಪಾಧ್ಯಕ್ಷೆ  ಮಮತಾ ಬಾಲಸುಬ್ರಮಣ್ಯ, ಚಾಮುಲ್ ಅಧ್ಯಕ್ಷ ವೈ.ಸಿ. ನಾಗೇಂದ್ರ, ನಿರ್ದೇಶಕ ಎಚ್.ಎಸ್. ಬಸವರಾಜು, ಮಹಾಸಭಾ ಅಧ್ಯಕ್ಷ  ಮೂಡ್ಲುಪುರ ನಂದೀಶ್, ನಿರ್ದೇಶಕ ಬಿಸಲವಾಡಿ ಉಮೇಶ್,  ಪಿಆರ್‌ಓ ಆರ್.ಎಂ.ಸ್ವಾಮಿ,  ಶರಣ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಬಿ.ಕೆ. ರವಿಕುಮಾರ್, ತಾಲೂಕು ಅಧ್ಯಕ್ಷ ಆರ್.ಎಸ್. ಲಿಂಗರಾಜು, ರೋಟರಿ ಅಧ್ಯಕ್ಷ ರಾಮಸಮುದ್ರ ನಾಗರಾಜು, ಕೆಂಪನಪುರ ಮಹದೇವಸ್ವಾಮಿ, ನಗರಸಭಾ ಸದಸ್ಯರಾದ ಚಿನ್ನಮ್ಮ, ಕರಿನಂಜನಪುರ ಸ್ವಾಮಿ, ಎಪಿಎಂಸಿ ಅಧ್ಯಕ್ಷ ಸೋಮೇಶ್, ಜಿ.ಪಂ.ಮಾಜಿ ಸದಸ್ಯ ರತ್ನಮ್ಮ, ದೊಡ್ಡರಾಯಪೇಟೆ ಗಿರೀಶ್, ಯಣಗುಂಬ ರಾಜೇಂದ್ರ, ಹೊಸೂರು ಜಗದೀಶ್, ಆರ್.ಪುಟ್ಟಮಲ್ಲಪ್ಪ, ಗೌಡಿಕೆ ನಾಗೇಶ್,  ಆರ್.ವಿ. ಮಹದೇವಸ್ವಾಮಿ, ಪ್ರಾಂಶುಪಾಲ  ಡಾ. ಮಹದೇವಸ್ವಾಮಿ, ದೇವರಾಜುಮೂರ್ತಿ, ಎಚ್.ಎಂ. ಉಮೇಶ್, ವಿನಯ್, ಬಸವಣ್ಣ, ಮುಖ್ಯ ಶಿಕ್ಷಕರಾದ ನಾಗೇಶ್ವರಿ, ಸಿದ್ದಪ್ಪ, ಅಧ್ಯಾಪಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು,
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net