ಸುತ್ತೂರು ಜಾತ್ರಾ ಪ್ರಚಾರ ರಥಕ್ಕೆ ಕೊಳ್ಳೇಗಾಲದಲ್ಲಿ ಸ್ವಾಗತ

21-kollegalphoto-4,,,,,
Published on

ಕೊಳ್ಳೇಗಾಲ: ಪಟ್ಟಣಕ್ಕೆ ಆಗಮಿಸಿದ ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ರಥಕ್ಕೆ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭೆಯ ಪದಾಧಿಕಾರಿಗಳು ಮಂಗಳವಾರ ಭವ್ಯ ಸ್ವಾಗತ ನೀಡಿದರು.

ಪಟ್ಟಣದ ಜೆಎಸ್‌ಎಸ್ ಕಾಲೇಜು ಆವರಣದಲ್ಲಿ ರಥಯಾತ್ರೆಗೆ ಮಾಜಿ ಶಾಸಕರಾದ ಆರ್.ನರೇಂದ್ರ ಮತ್ತು ಪರಿಮಳಾ ನಾಗಪ್ಪ ಪುಷ್ಪನಮನ ಸಲ್ಲಿಸಿದರು. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ರಥ ಮಂಗಳವಾದ್ಯದೊಂದಿಗೆ ಅಂಬೇಡ್ಕರ್ ರಸ್ತೆ, ಮಸೀದಿ ವೃತ್ತ, ಡಾ.ರಾಜ್‌ಕುಮಾರ್ ರಸ್ತೆ, ಡಾ.ವಿಷ್ಣುವರ್ಧನ್ ರಸ್ತೆ, ಅಚ್ಗಾಳ್ ವೃತ್ತ ತಲುಪಿತು. ಆನಂತರ ಯಳಂದೂರು ಕಡೆಗೆ ಬೀಳ್ಕೊಡಲಾಯಿತು.

ಮಾಜಿ ಶಾಸಕ ಆರ್.ನರೇಂದ್ರ ಮಾತನಾಡಿ, ವೈಶಿಷ್ಟೃತೆ ಮತ್ತು ವೈವಿಧ್ಯತೆಗೆ ಹೆಸರಾದ ಸುತ್ತೂರು ಜಾತ್ರೆ ಜ.26 ರಿಂದ ಆರಂಭವಾಗಲಿದೆ. ಜಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಬೇಕು. ಆ ಮೂಲಕ ಜಾತ್ರೆಯ ಮಹತ್ವ, ವಿಚಾರ ಧಾರೆಗಳನ್ನು ಅರಿಯಬೇಕು ಎಂದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಅಧ್ಯಕ್ಷ ಪುಟ್ಟಣ್ಣ, ಕಾರ್ಯದರ್ಶಿ ಮಹೇಶ್, ಜಿಲ್ಲಾ ನಿರ್ದೇಶಕ ಇಂದ್ರೇಶ್, ಚಾಮುಲ್ ಮತ್ತು ಕೆಎಂಎಫ್ ನಿರ್ದೇಶಕ ಮಧುವನಹಳ್ಳಿ ನಂಜುಂಡಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ನಗರಸಭೆ ಅಧ್ಯಕ್ಷೆ ರೇಖಾ, ಅಕ್ಕನ ಬಳಗ ಅಧ್ಯಕ್ಷ ಅರುಣ ಕಾರ್ತಿಕ್, ಕಾರ್ಯದರ್ಶಿ ಸವಿತಾ ಲೋಕೇಶ್, ಡಾ.ಲೋಕೇಶ್, ಉದ್ಯಮಿ ವೀರಮಾದು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net