ಸುತ್ತೂರಿನಲ್ಲಿ ಸೆ.30ಕ್ಕೆ ಮಾಸಿಕ ಸಾಮೂಹಿಕ ವಿವಾಹ

mysore-2-61
Published on

ಮೈಸೂರು: ನಂಜನಗೂಡು ತಾಲೂಕಿನ ಸುತ್ತೂರಿನಲ್ಲಿ ಸೆ.30ರಂದು ಮಾಸಿಕ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿದೆ.

ಎಲ್ಲ ವರ್ಗದವರೂ ಈ ಕಲ್ಯಾಣ ಕಾರ್ಯದಲ್ಲಿ ಭಾಗವಹಿಸಲು ಅವಕಾಶ ಇದೆ. ಅರ್ಜಿ ನಮೂನೆಯಲ್ಲಿ ವರ ಮತ್ತು ವಧುವಿನ ಭಾವಚಿತ್ರ ಲಗತ್ತಿಸಿರಬೇಕು. ಜಾತಿ ದೃಢೀಕರಣ ಪತ್ರ, ವಧುವರರ ವಯಸ್ಸಿನ ಬಗ್ಗೆ ಶಾಲೆಯಿಂದ ಪಡೆದ ದಾಖಲಾತಿ ದೃಢೀಕರಣ ಪತ್ರ ಲಗತ್ತಿಸಿರಬೇಕು. ಬಾಲ್ಯ ವಿವಾಹಕ್ಕೆ ಅವಕಾಶ ಇಲ್ಲ.

ಆಸಕ್ತರು ಸುತ್ತೂರಿನಲ್ಲಿರುವ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಬಳಿ ಹೆಸರು ನೋಂದಾಯಿಸಬೇಕು. ಮಾಹಿತಿಗಾಗಿ ದೂ. 08221232217, 232033, 9741342222, 9449030588 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net