

ಮೈಸೂರು: ಸುತ್ತೂರು ಜಾತ್ರಾ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ 31ನೇ ರಾಜ್ಯಮಟ್ಟದ ಭಜನಾ ಮೇಳದ ಪುರುಷರ ವಿಭಾಗದಲ್ಲಿ ಬೆಳಗಾವಿಯ ಸವದತ್ತಿ ತಾಲೂಕಿನ ಚಿಕ್ಕಉಳ್ಳಗೇರಿಯ ಬಾಲಲೀಲ ಸಂಗಮೇಶ್ವರ ಭಜನಾ ಮಂಡಳಿ ಪ್ರಥಮ ಬಹುಮಾನ ಪಡೆದುಕೊಂಡಿದೆ.
ನಂಜನಗೂಡಿನ ಬದನವಾಳು ಗ್ರಾಮದ ಬಸವೇಶ್ವರ ಭಜನಾ ಸಂಘ-ದ್ವಿತೀಯ, ಗುಂಡ್ಲುಪೇಟೆಯ ಬಸವೇಶ್ವರ ಭಜನಾ ಸಂಘ-ತೃತೀಯ, ನಂಜನಗೂಡು ತಾಲೂಕಿನ ದೇವನೂರಿನ ಗುರುಮಲ್ಲೇಶ್ವರ ಭಜನಾ ಸಂಘ-4, ಚಾಮರಾಜನಗರ ತಾಲೂಕಿನ ಉಡಿಗಾಲದ ಗುರುಮಲ್ಲೇಶ್ವರ ಭಜನಾ ಸಂಘಕ್ಕೆ 5ನೇ ಬಹುಮಾನ ನೀಡಲಾಯಿತು.
ಧಾರವಾಡದ ನವಲಗುಂದ ತಾಲೂಕಿನ ಶಿವಾನಂದ ಭಜನಾ ಸಂಘ, ಸರಗೂರು ತಾಲೂಕಿನ ಹಾಳಿಹುಂಡಿಯ ವಿನಾಯಕ ಭಜನಾ ಮಂಡಳಿ, ಅರಸೀಕೆರೆ ತಾಲೂಕಿನ ರಾಂಪುರದ ನಿರ್ವಾಣ ಸಿದ್ದೇಶ್ವರ ಭಜನಾ ಸಂಘ, ಮೈಸೂರಿನ ಕುಪ್ಪಲೂರಿನ ಶ್ರೀ ಶಿವರಾತ್ರೀಶ್ವರ ಹವ್ಯಾಸಿ ಭಜನಾ ಮಂಡಳಿ, ತಿ.ನರಸೀಪುರದ ತಾಲೂಕಿನ ಬೀಡನಹಳ್ಳಿಯ ರಾಮಭಜನಾ ಟ್ರಸ್ಟ್‌ಗೆ ಸಮಾಧಾನಕರ ಬಹುಮಾನ ಪ್ರದಾನ ಮಾಡಲಾಯಿತು.
ಚಾಮರಾಜನಗರದ ಉಡಿಗಾಲದ ಶರಣೆ ನೀಲಾಂಬಿಕೆ ಮಹಿಳಾ ಭಜನಾ ಸಂಘ-ಪ್ರಥಮ, ಹುಣಸೂರಿನ ಕಸ್ತೂರಿ ತಿಲಕ ಭಜನಾ ಮಂಡಳಿ-ದ್ವಿತೀಯ, ಬಾಗಲಕೋಟೆಯ ಹುನಗುಂದ ತಾಲೂಕಿನ ಶ್ರೀರೇಣುಕಾದೇವಿ ಜಾನಪದ ಕಲಾತಂಡ-ತೃತೀಯ, ಇದೇ ತಾಲೂಕಿನ ಶ್ರೀ ಹೊಳೆ ಹುಚ್ಚೇಶ್ವರ ಅಕ್ಕನ ಬಳಗ-4, ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮತ್ತಿಮನೆಯ ಮಹಿಳಾ ಭಜನಾ ತಂಡ-5
ಮೈಸೂರು ಮಂಡಿಮೊಹಲ್ಲಾದ ಹಂಸಧ್ವನಿ ಭಜನಾ ಮಂಡಳಿ-ಪ್ರಥಮ, ಬೋಗಾದಿಯ ಅಮೃತ ವಿದ್ಯಾಲಯ-ದ್ವಿತೀಯ, ಬೋಗಾದಿಯ ಸೀತಾರಾಮ ಮಹಿಳಾ ವೃಂದ-ತೃತೀಯ, ಗೌರಿಶಂಕರನಗರದ ಸ್ವರಾಂಜಲಿ ಮಹಿಳಾ ಭಜನಾ ಮಂಡಳಿ-4, ಕುವೆಂಪುನಗರದ ನೀಲಗಂಗಾ ಮಹಿಳಾ ಬಳಗ-5
ಬೋಗಾದಿಯ ಅಮೃತ ವಿದ್ಯಾಲಯಂ(ತಂಡ-1)-ಪ್ರಥಮ, ಬೋಗಾದಿಯ ಅಮೃತ ವಿದ್ಯಾಲಯಂ(ತಂಡ-2)-ದ್ವಿತೀಯ, ತುಮಕೂರಿನ ಸಿದ್ಧಗಂಗಾಮಠದ ಶಿವಕುಮಾರಸ್ವಾಮಿ ಭಜನಾ ತಂಡ-ತೃತೀಯ, ಧಾರವಾಡದ ಬಾಡದ ಮಾತಂಗದೇವಿ ಭಜನಾ ಸಂಘ-4, ಎಚ್.ಡಿ.ಕೋಟೆ ಯ ಮುಳ್ಳೂರಿನ ಬಸವೇಶ್ವರ ಭಜನಾ ತಂಡ-5.
ಮಂಡ್ಯಯ ಕಿರಗೋಡಿನ ಮಹಿಳಾ ಏಕತಾರಿ ತಂಡ-1, ಯಳಂದೂರು ತಾಲೂಕಿನ ಕೆತ್ತೂರಿನ ಶ್ರೀ ಚನ್ನರೂಢ ಸಂಘ-2, ಮಂಡ್ಯ ತಾಲೂಕಿನ ಕಾಸರವಾಡಿಯ ಈಶ್ವರಮ್ಮ ಕಲಾ ಸಂಘ-3, ಇದೇ ತಾಲೂಕಿನ ಕಟ್ಟೇದೊಡ್ಡಿಯ ಶ್ರೀ ಕೈವಾರ ತಾತಯ್ಯನವರ ಭಜನಾ ಮಂಡಳಿ-4, ಮಂಡ್ಯದ ಹೊಸಳ್ಳಿಯ ಶ್ರೀಜ್ಞಾನಾನಂದ ಕಲಾ ಬಳಗ-5
ತಮಿಳುನಾಡು ಈರೋಡ್‌ನ ತಾಳವಾಡಿಯ ಶ್ರೀ ಗುರುಮಲ್ಲೇಶ್ವರ ಭಜನಾ ತಂಡ-1, ಈ ತಾಲೂಕಿನ ಕಲಬಂಡಿಪುರ ಗ್ರಾಮದ ಶ್ರೀ ಗುರುಮಲ್ಲೇಶ್ವರ ಭಜನಾ ತಂಡ-2, ಇದೇ ತಾಲೂಕಿನ ಬೆಕಹಳ್ಳಿಯ ಶ್ರೀ ಗುರುಮಲ್ಲೇಶ್ವರ ಭಜನಾ ತಂಡ-3.
ಕೇರಳದ ಮಾನಂದವಾಡಿಯ ಶ್ರೀ ಗೌರಿಗಣೇಶ ಮಹಿಳಾ ಭಜನಾ ತಂಡ-1, ಕಾಸರಗೂಡು ಜಿಲ್ಲೆಯ ಶ್ರೀ ಪಾರ್ಥಸಾರಥಿ ಮಹಿಳಾ ತಂಡ-2, ಕಾಸರಗೋಡಿನ ಶ್ರೀ ದುರ್ಗ ಪರಮೇಶ್ವರ ಮಹಿಳಾ ತಂಡ-3
4 ದಿನ ನಡೆದ ಈ ಸ್ಪರ್ಧೆಯಲ್ಲಿ 501 ತಂಡಗಳು, ಅಂದಾಜು 4 ಸಾವಿರ ಕಲಾವಿದರು ಭಾಗವಹಿಸಿದ್ದರು. ವಿಜೇತ ತಂಡಗಳಿಗೆ ನಗದು ಬಹುಮಾನ, ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರ, ಪ್ರಯಾಣ ಭತ್ಯೆಯನ್ನು ನೀಡಲಾಯಿತು.