

ಯಾದಗಿರಿ: ಇತ್ತೀಚಿನ ದಿನಗಳಲ್ಲಿ ಹೆಪಟೈಟಿಸ್ ಕಾಯಿಲೆಗಳು ಹೆಚ್ಚಾಗುತ್ತಿದ್ದು ಇದರಿಂದ ಜಿಲ್ಲೆಯನ್ನು ಮುಕ್ತಗೊಳಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಜಿಪಂ ಸಿಇಒ ಗರೀಮಾ ಪನ್ವಾರ ಸಲಹೆ ನೀಡಿದರು.
ನಗರದ ಹೊರವಲಯದಲ್ಲಿನ ಯಿಮ್ಸ್ನ ಆಡಿಟೋರಿಯಂನಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ, ಹಾಗೂ ಜಿಲ್ಲಾ ಆರೋಗ್ಯ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಹೆಪಟೈಟಿಸ್ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 2030ರ ವೇಳೆಗೆ ಹೆಪಟೈಟಿಸ್ ಮುಕ್ತ ದೇಶವನ್ನಾಗಿಸುವ ಗುರಿ ಕೇಂದ್ರ ಸಕರ್ಾರ ಹೊಂದಿದೆ. ಈ ರೋಗ ನಿಯಂತ್ರಣಕ್ಕೆ ನಮ್ಮ ಜೀವನಶೈಲಿಯನ್ನು ಬದಲಾವಣೆ ಮಾಡಿಕೊಳ್ಳುವ ಅಗತ್ಯವಿದೆ ಎಂದರು.
ಹೆಪಟೈಟಿಸ್.ಬಿ ಲಸಿಕೆ ಹಾಕಿಸುವುದು. ಸುರಕ್ಷಿತ ರಕ್ತ ಮತ್ತು ಅದರ ಉತ್ಪನ್ನಗಳ ಬಳಕೆ, ಶುದ್ಧ ಕುಡಿಯುವ ನೀರನ್ನೇ ಸೇವಿಸುವುದು ಹಾಗೂ ನಮ್ಮ ಮನೆ ಸುತ್ತಮುತ್ತ ನೈರ್ಮಲ್ಯ ಕಾಪಾಡುವುದರಿಂದ ಈ ರೋಗ ನಿಯಂತ್ರಿಸಬಹುದಾಗಿದೆ. ಅಲ್ಲದೆ ಜಿಲ್ಲೆಯ ಎಲ್ಲ ಸಕರ್ಾರಿ ಆಸ್ಪತ್ರೆಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೆಪಟೈಟಿಸ್ ಖಾಯಿಲೆಗೆ ಉಚಿತ ತಪಾಸಣೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಕುಟುಂಬ ಕಲ್ಯಾಣಾಕಾರಿ ಡಾ.ಸಂಜೀವಕುಮಾರ ರಾಯಚೂರಕರ್, ಲಿವರ್ ಉರಿಯೂತನ್ನುಂಟು ಮಾಡುವ ಲಕ್ಷಣಗಳಿಗೆ ಹೆಪಟೈಟಿಸ್ ಎಂದು ಹೇಳಲಾಗುತ್ತದೆ. ಡೆಲ್ಟ್ ಫಾಕ್ಟರ್ ಎಂದು ಗುರತಿಸಲಾಗುವ ವೈರಸ್ಗಳಿಂದ ಈ ರೋಗ ಹರಡಬಹುದು. ಹೆಪಟೈಟಿಸ್ ಯಕೃತ್ತನ್ನು ಅಥವಾ ಪಿತ್ತಜನಕಾಂಗವನ್ನು ನಿಧಾನವಾಗಿ ನಾಶಪಡಿಸುವ ಒಂದು ಕಾಯಿಲೆ. ಈ ಸೋಂಕಿನಲ್ಲಿ ಎಬಿಡಿಇ ಎಂಬ ವಿಧಗಳಿವೆ. ಹೀಗಾಗಿ ಈ ರೋಗದ ಲಕ್ಷಣಗಳನ್ನು ಅರಿಯುವುದು ಮುಖ್ಯ. ಒಂದು ವೇಳೆ ನಿರ್ಲಕ್ಷ್ಯ ಮಾಡಿದರೆ, ಯಕೃತ್ತಿನ ಕ್ಯಾನ್ಸರ್ಗೂ ಕಾರಣವಾಗುತ್ತದೆ ಎಂದು ವಿವರಿಸಿದರು.
ಯಿಮ್ಸ್ ಡೀನ್ ಡಾ.ಹನುಮಂತ ಪ್ರಸಾದ ಮಾತನಾಡಿ, ರಕ್ತ ಪರೀಕ್ಷೆಗಳಿಂದ ಹೆಪಟೈಟಿಸ್. ಬಿ ವೈರಸ್ನ್ನು ಕಂಡುಹಿಡಿಯಬಹುದು. ಹೆಪಟೈಟಿಸ್ ಬಿ ಮತ್ತು ಸಿ ವೈರಸ್ ಪತ್ತೆಗಾಗಿ ಜನರು ಸ್ವಯಂ ಪ್ರೇರಿತವಾಗಿ ಪರೀಕ್ಷೆಗೆ ಮುಂದಾಗಬೇಕು. ಈ ವಿಷಯವನ್ನು ವ್ಯಾಪಕವಾಗಿ ಪ್ರಚಾರ ಮಾಡುವ ಅಗತ್ಯವಿದೆ ಎಂದರು.
ಉಪನ್ಯಾಸಕ