ಸುಣ್ಣದಕೇರಿಯಲ್ಲಿ ರಂಗೋಲಿ ಸ್ಪರ್ಧೆ

21
Published on

ಮೈಸೂರು: ಗಣಪತಿ ಉತ್ಸವದ ಅಂಗವಾಗಿ ವಿನಾಯಕರ ಸ್ನೇಹ ಬಳಗದ ವತಿಯಿಂದ ಸುಣ್ಣದಕೇರಿ 8ನೇ ಕ್ರಾಸ್ ಬೀದಿಯಲ್ಲಿ ಗುರುವಾರ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು.

ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ಮತ್ತು ವಿದ್ಯಾರ್ಥಿಗಳು ಬಿಡಿಸಿದ ಬಣ್ಣ ಬಣ್ಣದ ರಂಗೋಲಿಗಳು ನೋಡುಗರ ಗಮನ ಸೆಳೆದವು. ಭರತನಾಟ್ಯ, ಯೋಗ ಪ್ರದರ್ಶನ ಸಹ ಇತ್ತು. ಅಪೂರ್ವ ಶಿವಣ್ಣ, ಫೌಂಡೇಷನ್ ಅಧ್ಯಕ್ಷ ಮಹೇಶ್ ನಾಯಕ್, ಕಾರ್ಯದರ್ಶಿ ಬಿ.ಆರ್.ಮಂಜುನಾಥ, ಶಿವುಕುಮಾರ್, ರವಿ, ರಾಜು, ವಿಜಯ ಇನ್ನಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net