ಸುಡುವ ಹುಗ್ಗಿಯಲ್ಲಿ ಕೈ ಹಾಕಿದ ಮುತ್ಯಾ

16 bk 15
Published on

ಬಸವಕಲ್ಯಾಣ: ತಾಲೂಕಿನ ಯರಬಾಗ ಗ್ರಾಮದಲ್ಲಿನ ಶ್ರೀ ಜೈಮಾತಾ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಿಮಿತ್ಯವಾಗಿದೆ ನಡೆದ ಒಂದು ತಿಂಗಳ ಭಜನೆ ಸಂಗೀತ ಸೇವೆ ನಡೆಯಿತು. ವಿಶೇಷ ಪೂಜೆ ಕಾರ್ಯಕ್ರಮ ಭಕ್ತಿ ಶ್ರದ್ದೆಯಿಂದ ಜರುಗಿದ ಪ್ರಯುಕ್ತವಾಗಿ ಶ್ರಾವಣ ಮಾಸದ ಕೊನೆಯ ದಿನದಂದು ಸಮಾರೋಪ ಸಮಾರಂಭ ನಡೆಯಿತು.

ಬೆಳಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ನಂತರ ಗ್ರಾಮದ ಲಕ್ಷ್ಮೀದೇವಿ ಮಂದಿರ ಹಾಗೂ ಶ್ರೀ ಹುನುಮಾನ ದೇವಸ್ಥಾನದಲ್ಲಿ ತೆರಳಿ ಭಕ್ತರು ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ನಂತರ ಓಣಿಯ ಭಜನಾ ತಂಡದವರಿಂದ ಸಂಗೀತ ಸೇವೆ ಹಾಗೂ ತಮಟೆ ಭಾರಿಸುವ ತಂಡದವರಿಂದ ವಿಶೇಷವಾಗಿ ಸಂಗೀತ ಸೇವೆ ನಡೆಸಿದರು.

ಶ್ರೀ ಲಕ್ಷ್ಮೀ ದೇವಸ್ಥಾನದ ಶ್ರೀ ಪೀಠಾದಿಪತಿಯಾದ ಶ್ರೀ ಸುಧಾಕರ ಮುತ್ಯಾ ಇವರು ಸಮಾರೋಪದ ದಿವ್ಯಸಾನಿಧ್ಯ ವಹಿಸಿದರು. ಪೂಜೆಯ ಸಂದರ್ಬಧಲ್ಲಿ ಇವರು ಸುಡುವ ಹುಗ್ಗಿಯ ಕಡಾಯಿಯಲ್ಲಿ ಕೈಹಾಕುವ ಮೂಲಕ ಭಕ್ತಿ ಸಮರ್ಪಿಸಿದರು. ದರ್ಶನಕ್ಕೆ ಬಂದಂತ್ತ ಭಕ್ತಾದಿಗಳು ಸುಡುವ ಹುಗ್ಗಿಯ ಕಡಾಯಿಯಲ್ಲಿ ಸುಧಾಕರ ಮುತ್ಯಾ ಅವರು ಕೈಹಾಕುವದನ್ನು ಕಂಡು ಜನರು ಬಹಳ ಕುತುಹಲದಿಂದ ನೋಡಿ ಬಹಳ ಆಶ್ವರ್ಯಪಡುವಂತ್ತಾಗಿತ್ತು.

ಭಜನಾ ತಂಡದವರಾದ ವಿನೋದ ಮದರಗಾಂವಕರ್, ಗೌತಮ್, ಅಡೆಪ್ಪ ಮೇತ್ರಿ, ಸುಖಶಾಂತ್ ಅಭಿಲಾಷ್, ಉದಯ, ತೀರ್ಥ, ಪ್ರಶಾಂತ, ಶರಣಪ್ಪ, ಅಮೃತತಪ್ಪ, ಶ್ರೀಕಾಂತ ಮದರಗಾಂವಕರ್, ಪ್ವನ, ಚೇತನ್, ಮದನ, ಭಜನೆ ಮಹಿಳಾ ತಂಡದವರಾದ ಜಗದೇವಿ, ನೀಲಮ್ಮ, ಪಾರಮ್ಮ, ಲಕ್ಷ್ಮೀ, ಪುತಳಾಬಾಯಿ, ಸುಶಿಲಮ್ಮ, ವಿಮಲಾಬಾಯಿ, ತಿಪ್ಪಮ್ಮ, ಕಮಲಾಬಾಯಿ, ಜಗದೇವಿ ಆರ್, ಮಾಣಿಕಬಾಯಿ, ಹಾಗು ಮಲ್ಲ ಮುಂತಾದವರು ಭಜನೆ ಕಾರ್ಯಕ್ರಮದಲ್ಲಿ ಪಾಲ್ಗೋಂಡಿದರು. ನಂತರ ಸುತ್ತಮುತ್ತಲಿನ ಗ್ರಾಮಗಳಿಂದ ಬಂದAತ್ತ ಭಕ್ತಾದಿಗಳಿಗೆ ಮಹಾ ಪ್ರಸಾದ ವಿತರಣೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net