ಸುಡುಗಾಡು ಸಿದ್ದರು ಅವಕಾಶ ವಂಚಿತ

16-ANP-P2
ಆನಂದಪುರ ಸಮೀಪದ ಸಿದ್ದೇಶ್ವರ ಕಾಲನಿಯ ಅಲೆಮಾರಿ ಕುಟುಂಬಗಳ ಪ್ರದೇಶಕ್ಕೆ ಎಸ್‌ಸಿ, ಎಸ್‌ಟಿ ಮತ್ತು ಅಲೆಮಾರಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಭೇಟಿ ನೀಡಿದ್ದರು. ಮೋಹನ್‌ಕುಮಾರ, ನೇತ್ರಾವತಿ, ಎನ್.ಉಮೇಶ, ನಾಗರಾಜ್ ಇತರರಿದ್ದರು.
Published on

ಆನಂದಪುರ: ಸುಡುಗಾಡು ಸಿದ್ದ ಮತ್ತು ಅಲೆಮಾರಿ ಜನಾಂಗಕ್ಕೆ ವಿಶಿಷ್ಟ ಭಾಷೆ, ಪಾರಂಪರಿಕ ಕಲೆ ಮತ್ತು ಪ್ರತಿಭಾ ಸಾಮರ್ಥ್ಯವಿದ್ದರೂ ಹಲವು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಬೇಸರ ವ್ಯಕ್ತಪಡಿಸಿದರು.

ಸಿದ್ದೇಶ್ವರ ಕಾಲನಿಯ ಸುಡುಗಾಡುಸಿದ್ದ ಅಲೆಮಾರಿ ಜನರ ವಾಸದ ಪ್ರದೇಶಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿ ಮಾತನಾಡಿದ ಅವರು, ರಾಜ್ಯಾದ್ಯಂತ ಇರುವ ಅಲೆಮಾರಿ ಜನರು ನಿರ್ದಿಷ್ಟ ಸ್ಥಳದಲ್ಲಿ ವಾಸಿಸುವಂತೆ ಶಾಶ್ವತ ಪರಿಹಾರ ಒದಗಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಜಾತಿಗಣತಿ ಸಂದರ್ಭ ಈ ಸಮುದಾಯದವರು ಸುಡುಗಾಡು ಸಿದ್ದರು ಎಂದು ಜಾತಿಯನ್ನು ಕಡ್ಡಾಯವಾಗಿ ನಮೂದಿಸಬೇಕು. ಆಗ ರಾಜ್ಯಾದ್ಯಂತ ಇರುವ ಜನಸಂಖ್ಯೆ ಸ್ಪಷ್ಟವಾಗುತ್ತದೆ. ಒಳಮೀಸಲಾತಿ ಪಡೆಯಲು ಈ ಸಮುದಾಯಳು ಎಲ್ಲ ದೃಷ್ಟಿ ಯಿಂದ ಅರ್ಹತೆ ಪಡೆದಿವೆ ಎಂದರು.

ಆನಂದಪುರ ಗ್ರಾಪಂ ಸದಸ್ಯರಾದ ಮೋಹನ್‌ಕುಮಾರ, ನೇತ್ರಾವತಿ, ಸ್ಥಳೀಯ ಮುಖಂಡರಾದ ಎನ್.ಉಮೇಶ, ನಾಗರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net