

ಕೊಡೇಕಲ್: ಜ್ಞಾನದ ಕತ್ತಲೆ ಹೊಡೆದೊಡಿಸಿ ಸುಜ್ಞಾನದ ಬೆಳಕು ನೀಡುವವನೆ ಗುರು. ಗುರುವಿನ ಗುಲಾಮನಾಗುವವರೆಗೆ ಮುಕ್ತಿ ದೊರೆಯುವುದು ಅಸಾಧ್ಯ ಎಂದು ಆಧ್ಯಾತ್ಮಿಕ ಚಿಂತಕ ಇಮಾಮುದ್ದೀನ್‌ಸಾಬ್ ಅತ್ತಾರ್ ಹೇಳಿದರು.
ಗ್ರಾಮದ ದಾಸೋಹ ಮಹಾಮನೆಯಲ್ಲಿ ಗುರುಪೂರ್ಣಿಮೆ ನಿಮಿತ್ತ ಹಮ್ಮಿಕೊಂಡ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಹಲವು ಧರ್ಮ ಮತ್ತು ಗುರುಗಳಿದ್ದಾರೆ. ಆದರೆ ಇವರೆಲ್ಲರೂ ತೋರುವುದು ಒಂದೇ ಸನ್ಮಾರ್ಗ. ಹೀಗಾಗಿ ನಾವು ಗುರುವಿನ ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದರು.
ಬಸವಪೀಠಾಧಿಪತಿ ಶ್ರೀ ವೃಷಭೇಂದ್ರ ಅಪ್ಪ ಮಾತನಾಡಿ, ಗುರುಪೂರ್ಣಿಮಯನ್ನು ವ್ಯಾಸ ಪೂರ್ಣಿಮೆ ಎಂದು ಕರೆಯುತ್ತಾರೆ. ಇದು ಆಧ್ಯಾತ್ಮಿಕವಾಗಿ ಗುರುಗಳನ್ನು ಗೌರವಿಸುವ ಹಬ್ಬವಾಗಿದೆ ಎಂದರು. ಶಿಕ್ಷಕ ಎಸ್.ಎಸ್.ಮಾರನಾಳ ಮಾತನಾಡಿದರು. ಇದಕ್ಕೂ ಮೊದಲು ಭಕ್ತರಿಂದ ಶ್ರೀ ವೃಷಭೇಂದ್ರ ಅಪ್ಪ ಅವರ ಪಾದಪೂಜೆ ನೆರವೇರಿತು.
ಈರಪ್ಪಯ್ಯ ಸ್ವಾಮಿ ಹುಣಸಿಗಿಡದ, ಸಂಗಣ್ಣ ಮಹಲಿನಮಠ, ಈರಸಂಗಯ್ಯ ದೊಡ್ಡೆಗೋಳ, ವಿರೇಶ ಮುತ್ತಗಿ, ಬಸವರಾಜ ಭದ್ರಗೋಳ, ಸಂಗಪ್ಪ ಶಿವಪುರ, ಸಂಗಣ್ಣ ಪೂಜಾರಿ, ಕೃಷ್ಟಪ್ಪನಾಯಕ, ತಿಪ್ಪಣ್ಣ ದ್ಯಾಮನಾಳ, ಬಸವರಾಜ ಹೊಸಪೂಜಾರಿ, ಬಸಪ್ಪ ಪಂಜಗಲ್, ಗುರುಬಸ್ಸು ಪಂಜಗಲ್, ಚಂದ್ರಶೇಖರ ಹಾವೇರಿ, ಗವಿಸಂಗಯ್ಯ ಪಂಜಗಲ್, ಬಸಣ್ಣ ಬಾವೂರ, ಸಂಗಣ್ಣ ಉದ್ದನ, ಬಸಪ್ಪ ಮಂಟೆ, ಬಸವರಾಜ ಗೋನಟ್ಲ, ಸಂಗಮೇಶ ಅಡ್ಡಿ, ಬಸವರಾಜ ಕೆಂಡದ, ಎಸ್.ಎನ್.ಅಡ್ಡಿ, ಬಸವರಾಜಗೌಡ ರಾಮನಗೌಡ್ರ, ಮಲ್ಲಿಕಾರ್ಜುನ ಜಂಗಳಿ, ರಮೇಶ ಬಿರಾದಾರ, ಗುರುರಾಜ ಜೋಶಿ, ಕೋರಿಸಂಗಯ್ಯ ಗಡ್ಡದ ಇತರರಿದ್ದರು.
ಕೋರಿಸಂಗಯ್ಯ ಗಡ್ಡದ ಪ್ರಾಸ್ತಾವಿಕ ಮಾತನಾಡಿದರು. ಸೋಮಶೇಖರ ಪಂಜಗಲ್ ಸ್ವಾಗತಿಸಿದರು, ರವಿ ಅಡ್ಡಿ ವಂದಿಸಿದರು. ಸಂಗನಬಸ್ಸು ಪಂಜಗಲ್ ನಿರೂಪಣೆ ಮಾಡಿದರು.