

ಔರಾದ್: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸ್ವಸಹಾಯ ಸಂಘದ ಪ್ರಗತಿಪರ ಸಂಘಗಳ ಆರ್ಥಿಕವಾಗಿ ಹಿಂದುಳಿದ ಸದಸ್ಯರ ಮಕ್ಕಳ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣಕ್ಕೆ ನೆರವಾಗಲು `ಸುಜ್ಞಾನ ನಿಧಿ ಶಿಷ್ಯವೇತನ'ಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಎಸ್‌ಕೆಡಿಆರ್‌ಡಿಪಿ ಯೋಜನೆ ತಾಲೂಕು ಯೋಜನಾಧಿಕಾರಿ ರಾಘವೇಂದ್ರ ಗೌಡ ತಿಳಿಸಿದ್ದಾರೆ. ಎರಡರಿಂದ ಐದು ವರ್ಷದ ಅವಧಿಯ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣಕ್ಕೆ ಸಂಸ್ಥೆಯೂ ನಿಗದಿಪಡಿಸಿದ ಆಯ್ದ ಕೋರ್ಸ್ಗೆ ಅನುಗುಣವಾಗಿ ೪೦೦ರಿಂದ ೧೦೦೦ ರೂ. ಮಾಸಿಕವಾಗಿ ನೀಡಲಾಗುತ್ತದೆ. ತಾಲೂಕಿನ ಸ್ವಸಹಾಯ ಸಂಘದ ಸದಸ್ಯರ ಮಕ್ಕಳು ಸೆ.೫ರಿಂದ ಡಿ.೩೧ರವರೆಗೆ ಎಸ್‌ಕೆಡಿಆರ್‌ಡಿಪಿ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸುವಂತೆ ತಿಳಿಸಿದ್ದಾರೆ.