ಸುಗ್ರೀವಾಜ್ಞೆ ಮೂಲಕ ಜನರ ಬದುಕು ಬೀದಿಗೆ

2 GAJENDRAGAD 2
Published on

ಗಜೇಂದ್ರಗಡ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಸುಗ್ರೀವಾಜ್ಞೆ ಮೂಲಕ ರೈತರ, ಕಾರ್ವಿುಕರ ಹಾಗೂ ಜನರ ಬದುಕನ್ನು ಬೀದಿಗೆ ತಳ್ಳುತ್ತಿವೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್. ಪಾಟೀಲ ಆರೋಪಿಸಿದರು.

ಕೇಂದ್ರ ಸರ್ಕಾರ ಸುಗ್ರೀವಾಜ್ಞೆಗಳ ಕಾನೂನು ತಿದ್ದುಪಡಿ ಹಾಗೂ ಉತ್ತರ ಪ್ರದೇಶದ ಹತ್ರಾಸ್​ನಲ್ಲಿ ದಲಿತ ಮಹಿಳೆ ಮೇಲೆ ನಡೆದ ಅತ್ಯಾಚಾರ, ಕೊಲೆ ಹಾಗೂ ರಾಹುಲ್ ಗಾಂಧಿ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯ ಖಂಡಿಸಿ ನರೇಗಲ್ ಹಾಗೂ ಗಜೇಂದ್ರಗಡ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಲಾಲ್ ಬಹಾದೂರ್ ಶಾಸ್ತ್ರಿಗಳ ತತ್ತಾ್ವದರ್ಶಗಳು ನಮಗೆ ದಾರಿದೀಪ ಆಗಿವೆ. ಆದರೆ, ಮಹಾತ್ಮ ಗಾಂಧೀಜಿ ಅವರನ್ನು ದ್ವೇಷಿಸುವ ವಾತಾವರಣ ನಿರ್ವಣಕ್ಕೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಶ್ರಮಿಸುತ್ತಿರುವುದು ಆಘಾತಕಾರಿ ಬೆಳವಣಿಗೆ ಎಂದು ದೂರಿದರು.

ಸ್ಥಳೀಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ಘೊರ್ಪಡೆ, ತಾಪಂ ಉಪಾಧ್ಯಕ್ಷ ಶಶಿಧರ ಹೂಗಾರ, ಎಚ್.ಎಸ್. ಸೋಂಪುರ, ರಾಜು ಸಾಂಗ್ಲೀಕರ, ಎಫ್.ಎಸ್. ಕರಿದುರಗನವರ, ಬಿ.ಎಸ್. ಶೀಲವಂತರ, ಶ್ರೀಧರ ಬಿದರಳ್ಳಿ, ಮುತ್ತಣ್ಣ ಮ್ಯಾಗೇರಿ, ಯಲ್ಲಪ್ಪ ಬಂಕದ, ಅರ್ಜುನ ರಾಠೋಡ, ಅಂದಪ್ಪ ಬಿಚ್ಚೂರ, ಎ.ಸಿ. ಪಾಟೀಲ, ಅಪ್ಪು ಮತ್ತಿಕಟ್ಟಿ, ವೆಂಕಟೇಶ ಮುದಗಲ್, ಮುರ್ತಜಾ ಡಾಲಾಯತ, ಬಸವರಾಜ ಚನ್ನಿ, ಬಸವರಾಜ ಬಂಕದ, ಬಸವರಾಜ ಹುಚ್ಚಯ್ಯನಮಠ, ಅನಿಲ್ ಕರ್ಣೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net