

ಕಲಬುರಗಿ: ಕಲ್ಯಾಣ ಕರ್ನಾಟಕದ ತಿರುಪತಿಯೆಂದೇ ಪ್ರಖ್ಯಾತಿ ಪಡೆದ ಸುಗೂರ(ಕೆ) ಗ್ರಾಮದ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಬ್ರಹ್ಮೋತ್ಸವ ಗುರುವಾರದಿಂದ ಅ.೨೭ರವರೆಗೆ ಸಂಭ್ರಮದಿAದ ನಡೆಯಲಿದೆ ಎಂದು ದೇವಸ್ಥಾನ ಪ್ರಧಾನ ಅರ್ಚಕ ಸನ್ನತ್‌ದಾಸ್ ಮಹಾರಾಜ ತಿಳಿಸಿದರು.
ಗುರುವಾರ ಅಂಕುರಾರ್ಪಣೆ, ಧ್ವಜಾರೋಹಣ ಹೋಮ, ಗರುಡವಾಹನ, ಶುಕ್ರವಾರ ಮಹಾ ಅಭಿಷೇಕ ಪೂಜೆ, ಹೋಮ, ಕಲ್ಪವೃಕ್ಷ ವಾಹನ, ಶೇಷ ವಾಹನ, ಶನಿವಾರ ಬೆಳಗ್ಗೆ ೧೧ರಿಂದ ಶ್ರೀನಿವಾಸ ಕಲ್ಯಾಣೋತ್ಸವ, ಸಂಜೆ ೭ಕ್ಕೆ ಹನುಮಾನ ವಾಹನ, ಅ.೨೨ರಂದು ಬೆಳಗ್ಗೆ ೯ಕ್ಕೆ ತುಳಸಿ ಅರ್ಚನೆ, ಸಂಜೆ ೭ಕ್ಕೆ ಸಿಂಹ ವಾಹನ, ಅ.೨೩ರಂದು ಸೂರ್ಯಪ್ರಭ ವಾಹನ, ಚಂದ್ರಪ್ರಭ ವಾಹನ, ಪುಷ್ಪೋತ್ಸವ ಬನಡೆಯಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಭೂದೇವಿ, ಶ್ರೀದೇವಿ ಸಮೇತ ಶ್ರೀ ವೆಂಕಟೇಶ್ವರ ದೇವರಿಗೆ ನಿತ್ಯ ಹಲವು ಸೇವೆ ನೆರವೇರಲಿದೆ. ೨೪ಕ್ಕೆ ತುಳಸಿ ಅರ್ಚನಾ, ಬನ್ನಿ ಪೂಜಾ, ಅಶ್ವ ವಾಹನ, ೨೫ಕ್ಕೆ ಹಂಸ ವಾಹನ, ಗಜವಾಹನ ವಿರಾಜಮಾನ ನಡೆಯಲಿದೆ. ಸಂಜೆ ೯ರಿಂದ ಬೆಳಗ್ಗೆ ೫ಗಂಟೆವರೆಗೆ ನಗೆ ಹಬ್ಬ, ಸಂಗೀತ ರಸಮಂಜರಿ ನಡೆಯಲಿದೆ. ೨೬ಕ್ಕೆ ವಿಶೇಷ ಗಜವಾಹನ ಉತ್ಸವ, ಮಧ್ಯಾಹ್ನ ೩ಕ್ಕೆ ಕುಸ್ತಿ, ೨೭ಕ್ಕೆ ಬೆಳಗ್ಗೆ ೬ಕ್ಕೆ ಅಭಿಷೇಕ ಪೂಜೆ, ಬೆಳಗ್ಗೆ ೯ಕ್ಕೆ ಪಲ್ಲಕ್ಕಿ ಉತ್ಸವ, ಚಕ್ರಸ್ನಾನ ನಡೆಯಲಿದೆ ಎಂದರು.
ಬ್ರಹ್ಮೋತ್ಸವದಲ್ಲಿ ಹಾಥಿರಾಮ್‌ಜಿ ಮಠದ ಉಪ ಜಿಲ್ಲಾಧಿಕಾರಿ ಕೆ. ರಮೇಶ ನಾಯ್ಡು, ಶ್ರೀ ಕೃಷ್ಣದಾಸ್ ಮಹಾರಾಜ್ ಸೇರಿ ಅನೇಕ ಸಾಧು ಸಂತರು, ರಾಜಕೀಯ ಧುರೀಣರು, ಕವಿ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರಮುಖರಾದ ರಾಜೇಶ ಗುತ್ತೇದಾರ್, ದತ್ತು ಮುಚ್ಚಟ್ಟಿ, ಪ್ರಕಾಶ ಮೊಟಗಿ, ಸಿದ್ದು ಕೇಶ್ವಾರ ಇತರರಿದ್ದರು.