ಸುಗಮ ಸಂಚಾರಕ್ಕೆ ಅನುವು

10-UPBR-1
Published on

ಉಪ್ಪಿನಬೆಟಗೇರಿ: ಚಿಕಲ್​ಗುಡ್ಡ-ಪಡಗುದ್ರಿ ರಾಜ್ಯ ಹೆದ್ದಾರಿಯಲ್ಲಿ ಬರುವ ಉಪ್ಪಿನಬೆಟಗೇರಿ ಗ್ರಾಮದ ಪ್ರಮುಖ ರಸ್ತೆಯಲ್ಲಿ ಬಿದ್ದಿದ್ದ ತಗ್ಗು-ಗುಂಡಿಗಳಿಗೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಗುರುವಾರ ಖಡಿ ಹಾಕಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಗ್ರಾಮದ ಪ್ರಮುಖ ರಸ್ತೆ ಹಾಳಾಗಿದ್ದರಿಂದ ವಾಹನಗಳ ಚಾಲಕರು ಪರದಾಡುತ್ತಿದ್ದರು. ಹಲವು ದ್ವಿಚಕ್ರ ವಾಹನ ಸವಾರರು ನಿಯಂತ್ರಣ ತಪ್ಪಿ ಬಿದ್ದು ಆಸ್ಪತ್ರೆ ಸೇರಿದ್ದರು. ಈ ಕುರಿತು ವಿಜಯವಾಣಿ ಗುರುವಾರ ‘ಗುಂಡಿಮಯವಾದ ರಾಜ್ಯ ಹೆದ್ದಾರಿ’ ಎಂಬ ಶಿರ್ಷಿಕೆಯಡಿ ವರದಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಗುರುವಾರ ರಸ್ತೆಯಲ್ಲಿ ಬಿದ್ದ ತಗ್ಗು-ಗುಂಡಿಗಳನ್ನು ಖಡಿ ಹಾಕಿ ಮುಚ್ಚಿಸಿದ್ದಾರೆ. ರಸ್ತೆಯ ಸಮಸ್ಯೆ ಕುರಿತು ವರದಿ ಮಾಡಿ ಅಧಿಕಾರಿ ಗಳನ್ನು ಎಚ್ಚರಿಸಿ ರಸ್ತೆ ದುರಸ್ತಿಯತ್ತ ಗಮನ ಹರಿಸುವಂತೆ ಮಾಡಿದ ವಿಜಯವಾಣಿಯ ಸಾಮಾಜಿಕ ಕಳಕಳಿಗೆ ಗ್ರಾಮಸ್ಥರಾದ ಬಶೀರ ಅಹ್ಮದ ಮಾಳಗಿಮನಿ, ಯಲ್ಲಪ್ಪ ಕಳ್ಳಿ, ಶಿವನಪ್ಪ ಸುಣಗಾರ, ಅಕಲಾಕ ಅಹ್ಮದ ಮುಲ್ಲಾ, ಮುಸ್ತಾಕ ಅಹ್ಮದ ಮಕಾಂದಾರ, ಇತರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net