

ಚಿತ್ರದುರ್ಗ: ಪಂಜಾಬ್ ಶಾಸಕ ಸುಖ್ಪಾಲ್ ಸಿಂಗ್ ಖೈರಾ ಬಂಧನ ಖಂಡಿಸಿ ಕೆಪಿಸಿಸಿ ಕಿಸಾನ್ ವಿಭಾಗ ಜಿಲ್ಲಾ ಘಟಕದ ಕಾರ್ಯಕರ್ತರು ಚಿತ್ರದುರ್ಗದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಖೈರಾ ರೈತಪರ ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದು, ಶಾಸಕರಾಗಿ ಆಯ್ಕೆಯಾದ ನಂತರವೂ ಪಂಜಾಬ್ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿದ್ದಾರೆ. ಹೀಗಾಗಿ ಅವರ ಬಂಧನಕ್ಕೆ ಅಲ್ಲಿನ ಸಿಎಂ ಭಗವಂತ್ ಮಾನ್ ಸಿಂಗ್ ಕಾರಣ ಎಂದು ಧಿಕ್ಕಾರ ಕೂಗಿದರು.
ಹಳೆಯ ಪ್ರಕರಣ ಕೆದಕಿ ದ್ವೇಷ ರಾಜಕಾರಣಕ್ಕೆ ಮುಂದಾಗಿರುವುದು ಸರಿಯಲ್ಲ. ಕೂಡಲೇ ಖೈರಾ ಬಿಡುಗಡೆಗೆ ಸರ್ಕಾರ ಕ್ರಮವಹಿಸಬೇಕು ಎಂದು ಕೋರಿದರು.
ವಿಭಾಗದ ಜಿಲ್ಲಾಧ್ಯಕ್ಷ ಎ.ನಾಗರಾಜ, ಉಪಾಧ್ಯಕ್ಷ ಶಿವಲಿಂಗಪ್ಪ, ಮುಖಂಡರಾದ ಮುನಿರಾ ಎ.ಮಕಾಂದಾರ್, ರಾಜಣ್ಣ, ಮಾಡನಾಯಕನಹಳ್ಳಿ ಸೋಮಶೇಖರ್, ಪ್ರಶಾಂತ್ ಚಿಕ್ಕಪ್ಪನಹಳ್ಳಿ, ಆರ್.ಮಧುಕುಮಾರ್, ತಿಪ್ಪೇಸ್ವಾಮಿ, ಟಿಪ್ಪುಖಾಸಿಂ ಆಲಿ ಇತರರಿದ್ದರು.