ಸುಖ, ಸಮೃದ್ಧಿಗೆ ಧರ್ಮ ಮಾರ್ಗ ಅನುಸರಿಸಿ

1608 MLK 01
ಮಳಖೇಡ ಹೊರವಲಯದ ಏಳು ಸೀಮೆಯ ದುರ್ಗಾದೇವಿ ದೇವಸ್ಥಾನದಲ್ಲಿ ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರ ತುಲಾಭಾರ ನೆರವೇರಿತು. ಶ್ರೀ ಡಾ.ತ್ರಿಮೂರ್ತಿ ಶಿವಾಚಾರ್ಯರು, ಬಸವರಾಜ ರೇವಗೊಂಡ, ಚಂದ್ರಶೆಟ್ಟಿ ಬಂಗಾರ ಇತರರಿದ್ದರು.
Published on

ಮಳಖೇಡ: ಜೀನವದಲ್ಲಿ ಸುಖ, ಸಮೃದ್ಧಿ ಕಾಣಲು ಧರ್ಮ ಮಾರ್ಗ ಅನುಸರಿಸಬೇಕು ಎಂದು ಮಳಖೇಡದ ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರು ಹೇಳಿದರು.

ಏಳು ಸೀಮೆಯಲ್ಲಿರುವ ದುರ್ಗಾದೇವಿ ದೇವಸ್ಥಾನದಲ್ಲಿ ತೊಟ್ನಳ್ಳಿಯ ಶ್ರೀ ಡಾ.ತ್ರಿಮೂರ್ತಿ ಶಿವಾಚಾರ್ಯರ ಮೌನ ಅನುಷ್ಠಾನ ಮಹಾಮಂಗಲ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ, ಧರ್ಮವನ್ನು ಮರೆತ ಮಾನವ ಪಶು-ಪಕ್ಷಿಗಳಿಗೆ ಸಮ. ಲೋಕ ಕಲ್ಯಾಣಾರ್ಥ ತೊಟ್ನಳ್ಳಿಯ ಪೂಜ್ಯರು ಅಧಿಕ ಮಾಸದಲ್ಲಿ ಒಂದು ತಿಂಗಳ ಪರ್ಯಂತ ಮೌನ ಅನುಷ್ಠಾನ ಕೈಗೊಂಡಿದ್ದಾರೆ ಎಂದರು.

ತೊಟ್ನಳ್ಳಿಯ ಡಾ.ತ್ರಿಮೂರ್ತಿ ಶಿವಾಚಾರ್ಯರು ಮಾತನಾಡಿ, ಶ್ರದ್ಧೆಯಿಂದ ದುಡಿದವನಿಗೆ ದುರ್ಗಾದೇವಿ ಯಾವತ್ತು ಕೈ ಬಿಡುವುದಿಲ್ಲ. ನಿಷ್ಕಲ್ಮಷ ಭಕ್ತಿ ಅರ್ಪಣೆಯಿಂದ ಸುಖ, ಶಾಂತಿ ಪ್ರಾಪ್ತಿಯಾಗುತ್ತದೆ ಎಂದರು.

ಮಳಖೇಡ ಮೂಲಾಧಾರ ಕಟ್ಟಿಮನಿ ಸಂಸ್ಥಾನ ಹಿರೇಮಠದ ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರ ತುಲಾಭಾರ ನೆರವೇರಿತು.

ಶ್ರೀ ಸಿದ್ದಪ್ಪಯ್ಯ ತಾತಾ ಯಡಗಾ, ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ, ಪ್ರಮುಖರಾದ ಚಂದ್ರಶೆಟ್ಟಿ ಬಂಗಾರ, ಬಸವರಾಜ ರೇವಗೊಂಡ, ಬಿ.ಆರ್.ಪಾಟೀಲ್ ಸಂಗಾವಿ, ಮಲ್ಲಿಕಾರ್ಜುನ ಮುದ್ದಾ, ಕಾಳಪ್ಪ ರೇವಗೊಂಡ, ಶರಣು ಅವಂಟಿ, ಭೀಮರಾವ ಮಾಲಿಪಾಟೀಲ್, ಸಂಜು ಸೂರಾರ, ವಿಕ್ರಂ ಪಾಟೀಲ್, ವೀರೇಶ ಶಾಸ್ತ್ರೀ ಮಲಕೂಡ, ಶಿವರಾಜ ಅಣ್ಣೆಪ್ಪಗೋಳ, ಚಂದ್ರಕಾಂತ ಮುದಕನಳ್ಳಿ, ವೀರಭದ್ರಪ್ಪ ಹುಣಚೆಳ್ಳಿ, ಉಮೇಶ ಮಠಪತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net