ಸುಕೃತ ಸಮಾಜದ ಅವಿಭಾಜ್ಯ ಅಂಗ ಭಾಷೆ : ಡಾ.ಟಿ.ಎಸ್​.ನಾಗಾಭರಣ ಅಭಿಮತ, ಕನ್ನಡ ಅಭಿವೃದ್ಧಿ ಪ್ರಾಧಿಕಾರ&30 ವಿಚಾರ ಸಂಕಿರಣ

2
Published on

ರಾಮನಗರ: ಪ್ರತಿಯೊಬ್ಬ ಕನ್ನಡಿಗನೂ ಕನ್ನಡದ ಕಾವಲುಗಾರನಾಗಿ ಭಾಷೆ ಉಳಿಸಿ ಬೆಳೆಸುವುದರೊಂದಿಗೆ ವಿಚಾರ ವಿಮರ್ಶೆಗಳ ಜತೆ ಬದುಕು ಕಟ್ಟಿಕೊಳ್ಳಬೇಕಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಟಿ.ಎಸ್​.ನಾಗಾಭರಣ ತಿಳಿಸಿದರು.

ನಗರದ ಅಂಬೇಡ್ಕರ್​ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರ&30 ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸ ಮತ್ತು ನತೆ ಇದೆ. ನಮ್ಮ ನಾಡಿದ ಕಲೆ, ಸಂಸತಿ ಹಾಗೂ ಅಸ್ಮಿತೆಯ ಜತೆ ಸಾಮಾಜಿಕ ಪ್ರಭಾವಗಳ ವ್ಯಾಪ್ತಿಯಲ್ಲಿ ಕನ್ನಡ ಉಳಿಸಿ ಬೆಳೆಸುವ ಕೆಲಸ ನಮ್ಮಿಂದಾಗಬೇಕು ಎಂದರು.

ಭವಿಷ್ಯದ ಕನ್ನಡ ಕಾವಲುಗಾರರು ವಿದ್ಯಾರ್ಥಿಗಳು, ಕನ್ನಡವನ್ನು ಉಳಿಸುವ ಬೆಳೆಸುವ ಮತ್ತು ಒಟ್ಟಾರೆಯಾಗಿ ಕನ್ನಡದ ಅಸ್ಮಿತೆ ಕಾಪಾಡುವ ಜವಾಬ್ದಾರಿ ನಿಮ್ಮ ಮೇಲೆ ಇದೆ. ಯಾವುದೇ ಒಂದು ಸಾಂಸತಿಕ ವಲಯ ಸಮೃದ್ಧಿಯಾಗಿದ್ದರೆ ಮಾತ್ರ ಸಮಾಜ ಸಂಪದ್ಭರಿತವಾಗಿ, ಸದೃಢವಾಗಿ, ಸಮಾಜಮುಖಿಯಾಗಿ ಮತ್ತು ಸುಕೃತಿಯಾಗಿರುತ್ತದೆ. ಅಂತಹ ಒಂದು ಸಮಾಜವನ್ನು ನಿರ್ಮಾಣ ಮಾಡಬೇಕಾದರೆ ಭಾಷೆ ಅದರ ಅವಿಭಾಜ್ಯ ಅಂಗವಾಗಿ ಕೆಲಸ ಮಾಡುತ್ತದೆ. ಅಂತಹ ಅವಿಭಾಜ್ಯ ಅಂಗವಾದ ಭಾಷೆಯ ಜತೆಯಲ್ಲಿ ನಮ್ಮದೇನಿದೆ ನಮ್ಮ ತನವೇನಿದೆ ಇದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ್​ ಹಾನಗಲ್​ ಮಾತನಾಡಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಇಂದು 30ರ ಪ್ರಾಯ. ಪ್ರಾಧಿಕಾರವು ಕನ್ನಡ ಬಳಕೆ ಕುರಿತಂತೆ ಪರಿಶೀಲನೆ ನಡೆಸುವುದು, ಕನ್ನಡ ಭಾಷೆಯ ಅನುಷ್ಠಾನಕ್ಕೆ ತನ್ನದೇ ಚೌಕಟ್ಟಿನಲ್ಲಿ ಹಲವಾರು ಮಹತ್ತರ ಕಾರ್ಯ ಸಾಧಿಸಿದೆ ಎಂದರು. ಪ್ರತಿಯೊಂದು ಕ್ಷೇತ್ರದಲ್ಲಿ ಶೇಕಡಾ ನೂರಕ್ಕೆ ನೂರರಷ್ಟು ಕನ್ನಡ ಅನುಷ್ಠಾನ ಆಗಬೇಕು ಎಂದ ಸದುದ್ದೇಶದಿಂದ ಪ್ರಾಧಿಕಾರವು ಕಾರ್ಯನಿರ್ವಹಿಸುತ್ತದೆ. ಕನ್ನಡ ಅಸ್ಮಿತೆಯನ್ನು ಎತ್ತಿ ಹಿಡಿಯಲು ಹಲವಾರು ಕವಿ, ಕಲಾವಿದರು, ಚಿಂತಕರು, ಬರಹಗಾರರು, ಕತೆಗಾರರು ಅನೇಕ ಕೊಡುಗೆಯನ್ನು ಕನ್ನಡಕ್ಕೆ ನೀಡಿ ಕನ್ನಡದ ಕಲೆ ಸಂಸತಿ ಉಳಿಸಿ ಬೆಳೆಸಿದ್ದಾರೆ. ಈ ನಿಟ್ಟಿನಲ್ಲಿ ನಾವು ಕನ್ನಡಿಗರಾಗಿ ಕನ್ನಡದೊಂದಿಗೆ ಮುಂದಿನ ಪೀಳಿಗೆಗೆ ಕನ್ನಡ ಭಾಷೆ ತಲುಪುವಂತೆ ಮಾಡಬೇಕು ಎಂದರು.

ವಿಚಾರ ಸಂಕಿರಣದಲ್ಲಿ ಸಮೂಹ ಮಾಧ್ಯಮಗಳು ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡದ ಅನುಷ್ಠಾನ & ವರ್ತಮಾನದ ಸವಾಲುಗಳ ಕುರಿತ ಗಿರೀಶ್​ ರಾವ್​, ಪ್ರದರ್ಶಕ ಕಲೆಗಳಲ್ಲಿ ಕನ್ನಡ ಅಸ್ಮಿತೆ&ಒಲವು ನಿಲುವು ಕುರಿತು ಪೂರ್ಣಿಮಾ ಸುರೇಶ್​, ಕನ್ನಡ ಭಾಷೆಗೆ ಜನಪದದ ಕೊಡುಗೆ ಕುರಿತ ಪ್ರೊ. ಪಿ.ಕೆ. ರಾಜಶೇಖರ್​, ಸಾಹಿತ್ಯದಲ್ಲಿ ಕನ್ನಡದ ಇಂದಿನ ಅನುಸಂಧಾನ ಕುರಿತು ಡಾ. ಶ್ಯಾಮಸುಂದರ ಬಿದರಕುಂದಿ ಮತ್ತು ತಂತ್ರಾಂಶದಲ್ಲಿ ಕನ್ನಡ&ಭವಿಷ್ಯದ ಸಾಧನೆ ಕುರಿತು ವಸುದೇಂದ್ರ ವಿಷಯ ಮಂಡಿಸಿದರು.

ಪ್ರಾಧಿಕಾರದ ಸದಸ್ಯ ಡಾ. ರಮೇಶ್​ ಗುಬ್ಬಿಗೂಡು, ರಾಮನಗರ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ. ಎಂ. ಭೈರೇಗೌಡ, ವೀಣಾ ಕಾಳಯ್ಯ, ನಿರ್ಮಲಾ ಸುಶೀಲ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net