ಸುಂದರೇಶ ಬಾಬುಗೆ ಬೀಳ್ಕೊಡುಗೆ

2308-Kpl-Ravi-4
Published on

ಕೊಪ್ಪಳ: ನಿರ್ಗಮಿತಿ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬುಗೆ ಜಿಲ್ಲಾಡಳಿತದಿಂದ ಆತ್ಮೀಯವಾಗಿ ಬೀಳ್ಕೊಡುಗೆ ನೀಡಲಾಯಿತು.


ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಂದರೇಶ ಬಾಬು, ಜಿಲ್ಲಾಧಿಕಾರಿಯಾಗಿ ಒಂದು ವರ್ಷದ ಅವಧಿಯಲ್ಲಿ ಮಾಡಿದ ಸಾರ್ವಜನಿಕ ಸೇವೆ ಅವೀಸ್ಮರಣೀಯ. ಸವಿನೆನಪುಗಳೊಂದಿಗೆ ತೆರಳುತ್ತಿದ್ದೇನೆ. ಕೊಪ್ಪಳ ಜಿಲ್ಲೆಯ ಜನರು ಸಜ್ಜನರು. ಗೌರವಯುತವಾಗಿ ನಡೆಸಿಕೊಂಡರು. ಯುವಕರು, ಮಹಿಳೆಯರು, ನಾಗರಿಕರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸೇರಿ ಎಲ್ಲರು ಜಿಲ್ಲಾಡಳಿತ ಮತ್ತು ವಿವಿಧ ಇಲಾಖೆಗಳ ಬಗ್ಗೆ ಗೌರವ ಮನೋಭಾವ ಹೊಂದಿದ್ದನ್ನು ಕಂಡಿರುವೆ ಎಂದರು.


ಭೌಗೋಳಿಕವಾಗಿ ಕೊಪ್ಪಳ ವಿಶೇಷತೆ ಹೊಂದಿದೆ. ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ಭಾಗದಲ್ಲಿ ಸಾಲುಸಾಲು ಗುಡ್ಡಗಳು, ಕುಷ್ಟಗಿ, ಯಲಬುರ್ಗಾ ಕೊಪ್ಪಳ ಮತ್ತು ಇತರೆಡೆಯಲ್ಲಿ ಮಡ್ಡಿಗಳು, ಜಿಲ್ಲೆಯ ವಿವಿಧೆಡೆ ಇರುವ ಐತಿಹಾಸಿಕ ದೇವಾಲಯಗಳು, ಹತ್ತಿರದಲ್ಲಿಯೇ ಡಿಬಿ ಡ್ಯಾಂ, ವಿವಿಧೆಡೆ ಕಂಡು ಬರುವ ಕಾಲುವೆಗಳು ಎಲ್ಲವೂ ನನ್ನನ್ನು ತುಂಬಾ ಆಕರ್ಷಿಸಿವೆ. ಬೆಳಗಾವಿ, ಧಾರವಾಡ, ವಿಜಯಪುರ ಜಿಲ್ಲೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಮಾಡಿದ ಸೇವೆಯಿಂದ ಜನಮೆಚ್ಚುಗೆ ಗಳಿಸಿರುವೆ. ಗದಗ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಮಾಡಿದ ಸೇವೆ ಅವೀಸ್ಮರಣೀಯ ಎಂದು ಭಾವುಕರಾದರು.


ಡಿಸಿ ನಲಿನ್ ಅತುಲ್, ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಎಡಿಸಿ ಸಾವಿತ್ರಿ ಕಡಿ, ಸಹಾಯಕಾಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net