

ಕುಶಾಲನಗರ: ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಸುಂದರನಗರದಲ್ಲಿ 2.25 ಲಕ್ಷ ರೂ. ವೆಚ್ಚದ ಮೆಟ್ಲಿಂಗ್ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಗ್ರಾಪಂ ಸದಸ್ಯ ಕೆ.ಬಿ.ಶಂಶುದ್ದೀನ್ ಭಾನುವಾರ ಪರಿಶೀಲನೆ ನಡೆಸಿದರು.
ಜಿಲ್ಲಾ ಪಂಚಾಯಿತಿ ಅನುದಾನದಡಿ ಸುಂದರನಗರದ ಕೋರೆ ರಸ್ತೆಯಲ್ಲಿ ಸುಮಾರು 185 ಮೀಟರ್ ಉದ್ದದ ಮೆಟ್ಲಿಂಗ್ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಗುತ್ತಿಗೆದಾರನಿಗೆ ಶಂಶುದ್ದೀನ್ ಸೂಚಿಸಿದರು.
ಸುಂದರನಗರದಲ್ಲಿ ರಸ್ತೆ ಮೆಟ್ಲಿಂಗ್ ಕಾಮಗಾರಿ ನಡೆಯುತ್ತಿದೆ. ಸಮುದಾಯ ಭವನವನ್ನೂ ಅಭಿವೃದ್ಧಿಪಡಿಸಲಾಗಿದೆ. ಸರ್ಕಲ್ಗೆ ಹೈಮಾಸ್ಟ್ ಲೈಟ್ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಅಮೃತ ಗ್ರಾಮ ಯೋಜನೆಯ ಅನುದಾನದಲ್ಲಿ ಸ್ಮಶಾನವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಅವರು ತಿಳಿಸಿದರು. ಸುಂದರನಗರದ ನಿವಾಸಿಗಳು ಹಾಜರಿದ್ದರು.