

ಬಾಗಲಕೋಟೆ: ಸಿದ್ದೇಶ್ವರ ಶ್ರೀಗಳು ಹುಟ್ಟಿದ, ನಡೆದಾಡಿದ ಈ ನಾಡಿನಲ್ಲಿ ಹುಟ್ಟಿದ ನಾವೆಲ್ಲರೂ ಧನ್ಯರು, ಭಾಗ್ಯವಂತರು , ಶ್ರೀಗಳು ತೋರಿದ ನಿಸ್ವಾರ್ಥ ಸೇವೆ, ಸರಳ ಬದುಕನ್ನು ನಮ್ಮ ಬದುಕಲ್ಲಿ ಪ್ರಾಮಾಣಿಕವಾಗಿ ಅಳವಡಿಸಿಕೊಂಡರೆ ಸುಂದರ ಸಮಾಜದ ನಿರ್ಮಾಣ ಮಾಡಬಹುದು ಎಂದು ಬವಿವಿ ಸಂಘದ ಗೌರವಾನ್ವಿತ ಸದಸ್ಯರಾದ ಸಿದ್ರಾಮ ಮನಹಳ್ಳಿ ನುಡಿದರು.
ವಚನ ರಕ್ಷಕ ಗೆಳೆಯರ ಬಳಗ ವಿದ್ಯಾಗಿರಿ ಆಯೋಜಿಸಿದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಶ್ರೀಗಳ ಪ್ರಥಮ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸಿದ ಗುರುನಮನ ಕಾಯ೯ಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ, ಆಯೋಜಕರನ್ನು ಶ್ಲಾಘನೆ ಮಾಡಿ ಬೀಳುವವರನ್ನು ಎಬ್ಬಿಸುವ ವಚನ ಮಾಡಿದ ವಚನ ರಕ್ಷಕ ಗೆಳೆಯರ ಬಳಗದ ಕಾಯ೯ ಶ್ಲಾಘನೀಯ ತಾವು ಧನ್ಯರು ವಿಶ್ವ ಕಂಡ ಶ್ರೇಷ್ಠ ಸಂತ ಸಿದ್ದೇಶ್ವರ ಬುದ್ದಿಗಳು ಬರದ ನಾಡನ್ನು ಸಮೃದ್ದಿ ಮಾಡಿದ್ದು ಸಿದ್ದೇಶ್ವರ ಅಪ್ಪಂಗಳ ಕೊಡುಗೆ ಎಂದರು.
ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾ ಅಧ್ಯಕ್ಷರಾದ ಜಿ.ಎನ್.ಪಾಟೀಲ ಮಾತನಾಡಿ ವಿಜಯಪುರ ಎರಡು ಗುಮ್ಮಟಗಳಿಗೆ ಪ್ರಸಿದ್ಧಿಯಾಗಿದೆ ವಿಶ್ವವಿಖ್ಯಾತ ಗೋಳಗುಮ್ಮಟ ಹಾಗೂ ಜ್ಞಾನ ಗುಮ್ಮಟ ತತ್ವಜ್ಞಾನಿ ಶ್ರೀ ಸಿದ್ದೇಶ್ವರ ಅಪ್ಪಂಗಳು ಎಂದರು.
ವಿದ್ಯಾಗಿರಿಯ ಕನ್ನೂರು ಹಿರೇಮಠದ ಶ್ರೀ ವಿಶ್ವ ರಾಜೇಂದ್ರ ಮಹಾಸ್ವಾಮಿಗಳು, ಶ್ರೀಗಳು ಭೂಮಿ ಮೇಲಿನ ದೇವರು ರಾಮನ - ಕೃಷ್ಣನ ನಡೆ ನುಡಿಯನ್ನು ನಾವು ಶ್ರೀಗಳಲ್ಲಿ ಕಂಡಿದ್ದೇವು. ಅವರ ಕಾಯ ಮರೆಯಾದರೂ ಛಾಯ ಮರೆಯಾಗಿಲ್ಲ ಎಂದರು.
ಖ್ಯಾತ ಸಂಗೀತಗಾರರಾದ ಡಾ.ಸಿದ್ಧರಾಮಯ್ಯ ಮಠಪತಿ, ಡಾ.ಕಾಶಿಲಿಂಗ ಮಠ.ಡಾ.ರೇವಣಸಿದ್ದೇಶ್ವರ ಬೆಣ್ಣೂರು ಹಾಗೂ ಸಂತೋಷ ಗದ್ದನಕೇರಿ ಹಾಗೂ ಸಂಗಡಿಗರಿಂದ ಭಕ್ತಿಪೂವ೯ಕ ಸಂಗೀತ ನಮನ ಸಲ್ಲಿಸಲಾಯಿತು. ಶಶಿಧರ ಹಂಜಿ ಸ್ವಾಗತಿಸಿದರು.ಮೋಹನ ದೇಶಪಾಂಡೆ ಕಾಯ೯ಕ್ರಮ ನಿರೂಪಿಸಿ ವಂದಿಸಿದರು.ವಚನ ರಕ್ಷಕ ಗೆಳೆಯರ ಬಳಗದ ಚಂದ್ರು ವಿರಕ್ತಮಠ.ಶಿವಲಿಂಗ ಕುದುರಿ ಕನ್ನೂರ.ರವಿಕುದುರಿ ಕನ್ನೂರ. ಗೋವಿಂದ ಖ್ಯಾದಿಕೇರಿ.ಶಿವಾನಂದ ಕುಂಬಾರ.ಶಂಕ್ರಯ್ಯ ಗಣಾಚಾರಿ, ಸಂಗಮೇಶ ಹೂಲಗೇರಿ, ಶ್ರೀಶೈಲ ಡೆಂಗಿ, ಹಣಮಂತ ತೆಗ್ಗಿ, ಸಂಗಪ್ಪಾ ಹಡಪದ ಹಾಗೂ ಈಶ್ವರ ಕುದರಿ ಕನ್ನೂರ ಕಾಯ೯ಕ್ರಮದ ನೇತ್ರತ್ವ ವಹಿಸಿದ್ದರು.