ಸುಂದರ ಬದುಕಿಗೆ ಶರಣರ ವಚನ ಸಹಕಾರಿ

12-09kodekal01
ಕೊಡೇಕಲ್‌ನಲ್ಲಿ ಸೋಮವಾರ ಸಂಚಾರಿ ಶಿವಾನುಭವ ಆಧ್ಯಾತ್ಮಿಕ ಪ್ರವಚನಕ್ಕೆ ತೆಂಗಿನ ಸಸಿ ನೆಡುವ ಮೂಲಕ ಚಾಲನೆ ನೀಡಲಾಯಿತು. ಶ್ರೀ ಡಾ.ಗುರುಲಿಂಗ ಸ್ವಾಮೀಜಿ, ಶಾಮಸುಂದರ ಜೋಶಿ, ರಂಗನಾಥ ದೊರಿ ಇತರರಿದ್ದರು.
Published on

ಕೊಡೇಕಲ್: ಜೀವನದಲ್ಲಿ ಸುಂದರ ಬದುಕು ರೂಪಿಸಿಕೊಳ್ಳಲು ಶರಣರ ವಚನಗಳು ತುಂಬ ಸಹಕಾರಿಯಾಗಿವೆ ಎಂದು ಅಗಡಿ ಅಕ್ಕಿ ಮಠದ ಶ್ರೀ ಡಾ.ಗುರುಲಿಂಗ ಸ್ವಾಮೀಜಿ ನುಡಿದರು.

ಗ್ರಾಮದ ವಿರಕ್ತ ಮಠದ ಶ್ರೀ ರಾಚೇಶ್ವರ ಶಿವಯೋಗಿಗಳ ೫೫೫ನೇ ಸ್ಮರಣೋತ್ಸವ ನಿಮಿತ್ತ ಆಯೋಜಿಸಿರುವ ಶ್ರಾವಣ ಮಾಸ ಸಂಚಾರಿ ಶಿವಾನುಭವ ಆಧ್ಯಾತ್ಮಿಕ ಪ್ರವಚನಕ್ಕೆ ಸೋಮವಾರ ಸಂಜೆ ಚಾಲನೆ ನೀಡಿದ ಅವರು, ೧೨ನೇ ಶತಮಾನದಲ್ಲಿ ಬಸವಾದಿ ಶರಣರು ರಚಿಸಿರುವ ವಚನಗಳು ಜೀವನಕ್ಕೆ ಸ್ಫೂರ್ತಿ ನೀಡುತ್ತವೆ. ವಚನಗಳು ಒಂದು ಅಮೂಲ್ಯವಾದ ನಿಧಿ ಇದ್ದಂತೆ. ಅರಿತರೆ ಶರಣ, ಮರೆತರೆ ಮಾನವ ಎನ್ನುವಂತೆ ವಚನಗಳ ವಿಚಾರವನ್ನು ಅರಿತು ನಡೆಯಬೇಕಿದೆ ಎಂದರು.

ವಿರಕ್ತಮಠದ ಶ್ರೀ ನೀಲಕಂಠ ಸ್ವಾಮೀಜಿ, ಶಾಮಸುಂದರ ಜೋಶಿ, ಬಸಲಿಂಗಯ್ಯ ಮಠ, ರಂಗನಾಥ ದೊರಿ, ವೀರಸಂಗಪ್ಪ ಹಾವೇರಿ, ಭೀಮನಗೌಡ ಮಾಲಿಪಾಟೀಲ್, ಸೋಮಲಿಂಗಪ್ಪ ದೋರಿ, ವಸಂತಗೌಡ ಮಾಲಿಗೌಡ್ರ, ಕನಕು ಜಿರಾಳ, ದೇವು ಗೋಪಾಳಿ, ಮೋಹನ ಪಾಟೀಲ್, ಸಂಗನಗೌಡ ಪೊಲೀಸ್ ಪಾಟೀಲ್, ಅಮರಪ್ಪ ಸಜ್ಜನ್, ವೀರಸಂಗಪ್ಪ ಅಂಬ್ಲಿಹಾಳ, ರುದ್ರಪ್ಪ ಅಂಗಡಿ, ರವಿಂದ್ರ ಅಂಗಡಿ, ಸಾತಪ್ಪ ಪಡಶೆಟ್ಟಿ, ಈರಪ್ಪ ನಾಲತವಾಡ, ತಿಪ್ಪಣ್ಣ ದ್ಯಾಮನಾಳ, ವಿಜಯಕುಮಾರ ತುಮರಿಕೊಪ್ಪ, ಅಂಬಣ್ಣ ದೋರಿ, ಮಲ್ಲಣ್ಣ ಹೂಗಾರ ಇತರರಿದ್ದರು. ಸಂಗಮೇಶ ಮತ್ತು ನಿಂಗಣ್ಣ ಸಂಗೀತ ನಡೆಸಿಕೊಟ್ಟರು.

ಯಣ್ಣಿವಡಿಗೇರಿಯಲ್ಲಿ ೫ ದಿನ ನಡೆದು ಬಂದ ಸಂಚಾರಿ ಪ್ರವಚನದ ಬಸವ ಜ್ಯೋತಿಗೆ ಮುತ್ತೈದೆಯರು ಸ್ವಾಗತಿಸಿದರು. ಶ್ರೀ ರಾಚೇಶ್ವರ ಶಿವಯೋಗಿಗಳ ಭಾವಚಿತ್ರ, ಬಸವ ಜ್ಯೋತಿಯ ಮೆರವಣಿಗೆಯೊಂದಿಗೆ ಈಶ್ವರ ದೇವಸ್ಥಾನಕ್ಕೆ ಆಗಮಿಸಿದರು. ನಂತರ ತೆಂಗಿನ ಸಸಿ ನೆಟ್ಟು ಪ್ರವಚನಕ್ಕೆ ಚಾಲನೆ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net