

ಕಲಬುರಗಿ: ಕಲ್ಯಾಣ ಕರ್ನಾಟಕ ಮಹಾನಗರ ನಾಗರಿಕ ಮತ್ತು ಸೇವಾ ಸಮಿತಿಗಳು ಕಲಬುರಗಿ ಮಹಾನಗರವನ್ನು ಸುಂದರವನ್ನಾಗಿಸಲು ಪೂರಕವಾಗಿವೆ ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ್ ಸೇಡಂ ಅಭಿಮತ ವ್ಯಕ್ತಪಡಿಸಿದರು.
ನಗರದ ನೆಹರು ಗಂಜ್ ಪ್ರದೇಶದ ದಾಲ್ ಮಿಲ್ಲರ್ಸ ಸಂಘದ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸಮಿತಿಗಳ ಉದ್ಘಾಟನಾ ಸರಳ ಸಮಾರಮಭದಲ್ಲಿ ಮಾತನಾಡಿದ ಅವರು, ಎರಡು ಸಮಿತಿಗಳು ಸರ್ಕಾರಿ ವ್ಯವಸ್ಥೆ ಮತ್ತು ಸಜ್ಜನರ ಸಹಕಾರದಿಂದ ಸತ್ಕಾರ್ಯಗಳ ಮುಖಾಂತರ ಆಂತರಿಕ ಮತ್ತು ಬಾಹ್ಯವಾಗಿ ನಗರವನ್ನು ಸುಂದರ ನಗರವನ್ನಾಗಿಸಲು ಶ್ರಮಿಸಲಿದ್ದು, ಮಹಾನಗರ ಜನತೆ ಸಹಕಾರ ಅಗತ್ಯ ಎಂದರು.
ಕೇಂದ್ರಿಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಚ್.ಎಂ. ಮಹೇಶ್ವರಯ್ಯ, ನಗರದ ಅಭಿವೃದ್ಧಿಗೆ ಈ ಸಮಿತಿಗಳು ಪ್ರಾಮಾಣಿಕ ಕಾರ್ಯ ನಿರ್ವಹಿಸಲಿ ಎಂದು ಶುಭ ಕೋರಿದರು.ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅಧ್ಯಕ್ಷತೆ ವಹಿಸಿದ್ದರು. ಕಲ್ಯಾಣ ಕರ್ನಾಟಕ ಮಹಾನಗರ ನಾಗರಿಕ ಸಮಿತಿ ಅಧ್ಯಕ್ಷ ಶಾಂತಕುಮಾರ ಬಿಲಗುಂದಿ, ಉಪಾಧ್ಯಕ್ಷ ಉಮೇಶ ಶೆಟ್ಟಿ, ಸೇವಾ ಸಮಿತಿ ಅಧ್ಯಕ್ಷ ರವೀಂದ್ರ ಮುಕ್ಕಾ, ಉಪಾಧ್ಯಕ್ಷ ಗಣೇಶ ತಾಪಾಡಿಯ, ವಿಕಾಸ ಅಕಾಡೆಮಿಯ ವ್ಹಿ.ಶಾಂತರೆಡ್ಡಿ, ಮಾರ್ಥಂಡ ಶಾಸ್ತ್ರಿ, ಚಂದ್ರಶೇಖರ ತಳ್ಳಳ್ಳಿ ಉಪಸ್ಥಿತರಿದ್ದರು. ಕಲಬುರಗಿ, ಕಲ್ಯಾಣ ಕರ್ನಾಟಕ,