

ವಿಜಯವಾಣಿ ಸುದ್ದಿಜಾಲ ಗದಗ
ಗಿರಿ ಶಿಖರ ವನ್ಯ ಸಂಪತ್ತು ಕರಾವಳಿಯನ್ನು ತನ್ನೊಡಲಲ್ಲಿ ಇರಿಸಿಕೊಂಡು ಮೆರೆಯುತ್ತಿದ್ದ ಕರ್ನಾಟಕ ರಾಜ್ಯ ಇಂದು ತನ್ನ ತನವನ್ನು ಕಾಪಾಡಿಕೊಳ್ಳಲು ಹೆಣಗುವಂತಾಗಿದೆ ಎಂದು ನಿವೃತ್ತ ಡಿಡಿಪಿಐ ಐ.ಬಿ.ಬೆನಕೊಪ್ಪ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬುಧವಾರ ಜರುಗಿದ ಕರ್ನಾಟಕ ರಾಜ್ಯೋತ್ಸವ ಹಾಗೂ ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸುಂದರ ಕರ್ನಾಟಕವನ್ನು ಕಳೆದುಕೊಂಡಿದ್ದೇವೆ. ಸಾಹಿತಿಗಳು ವಣಿರ್ಸಿದ ಕನ್ನಡ ನಾಡು ಇಂದು ನಶಿಸಿ ಹೋಗಿದೆ. ಸಾಹಿತಿ ಕಂಡ ಕರ್ನಾಟಕವನ್ನು ಮರು ಸ್ಥಾಪಿಸುವ ಜವಾಬ್ದಾರಿ ಯುವಕರ ಮೇಲಿದೆ ಎಂದರು.
ಸರ್ಕಾರಿ ನೌಕರರ ಸಂದ ಜಿಲ್ಲಾಧ್ಯ ರವಿ ಗುಂಜೀಕರ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಯಾವುದೇ ಕನ್ನಡ ಪರ ಕೆಲಸಗಳಿಗೆ ಜಿಲ್ಲಾ ನೌಕರರ ಸಂ ಸದಾ ಸಹಕಾರಿ ಆಗಿರುತ್ತದೆ ಎಂದರು.
ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯ ಡಾ. ಅರ್ಜುನ ಗೊಳಸಂಗಿ ಮಾತನಾಡಿ, ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ದಲಿತರ ಉನ್ನತಿಗೆ ಶ್ರಮಿಸುತ್ತಿದೆ. ಡಾ. ಸಿದ್ದಲಿಂಗಯ್ಯನವರನ್ನು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯರನ್ನಾಗಿ ಮಾಡಿತು. ಅಲ್ಲದೇ ದಲಿತ ಸಾಹಿತಿಗಳನ್ನು ಗುರುತಿಸಿ ಅವರಿಗೆ ಪುರಸ್ಕರಿಸಿ ಗೌರವಿಸಿತು. ಅದಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತಿಗೆ ದಲಿತ ಸಾಹಿತ್ಯ ಪರಿಷತ್ತು ಋಣಿಯಾಗಿದೆ ಎಂದರು. ಇಸ್ರೊ ವಿಜ್ಞಾನಿ ಸುದೀಂದ್ರ ಬಿಂದಗಿ ಸಾಂದಭಿರ್ಕವಾಗಿ ಮಾತನಾಡಿದರು.
ನಂದಿವೇರಿ ಮಠದ ಶಿವಕುಮಾರ ಶ್ರೀಗಳು, ಜಿಲ್ಲಾ ಕಸಾಪ ಅಧ್ಯ ವಿವೇಕಾನಂದಗೌಡ ಪಾಟೀಲ ಮಾತನಾಡಿದರು.
ಕೆ. ಎಚ್. ಬೇಲೂರ, ಬಿ. ಎ್. ಚೇಗರಡ್ಡಿ, ಗಣೇಶಸಿಂಗ್ ಬ್ಯಾಳಿ, ವನಮಾಲಾ ಮಾನಶೆಟ್ಟಿ , ಎಸ್. ಬೆನಕಣ್ಣವರ, ಕವಿತಾ ಕಾಶಪ್ಪನವರ, ಡಾ. ಕಾವೇಂಶ್ರೀ ಹಲವರು ಇದ್ದರು.