ಸುಂಟಿಕೊಪ್ಪದಲ್ಲಿ ಸಂಚಾರ ದಟ್ಟಣೆ

13sunti02
Published on

ಸುಂಟಿಕೊಪ್ಪ: ಸಂತೆ ದಿನವಾದ ಭಾನುವಾರ ಸುಂಟಿಕೊಪ್ಪದಲ್ಲಿ ಪ್ರವಾಸಿಗರ ದಂಡು ಹೆಚ್ಚಾದ ಕಾರಣ ಮಡಿಕೇರಿ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಕಂಡುಬಂತು.


ಕೊಡಗಿನಲ್ಲಿ ಮಳೆ ತಗ್ಗಿರುವುದು ಹಾಗೂ ಸಾಲು ರಜೆ ಹಿನ್ನಲೆಯಲ್ಲಿ ಬೆಂಗಳೂರು, ಮೈಸೂರು, ಚೆನ್ನೈ, ಹೈದರಾಬಾದ್, ಉತ್ತರಪ್ರದೇಶ ಸೇರಿದಂತೆ ಇತರೆಡೆಯಿಂದ ಕೊಡಗಿನ ಪ್ರವಾಸಿ ತಾಣಗಳಿಗೆ ಜನರು ಭೇಟಿ ನೀಡುತ್ತಿದ್ದಾರೆ.


2ನೇ ಶನಿವಾರ, ಭಾನುವಾರ ಹಾಗೂ ಸ್ವಾತಂತ್ರೃ ದಿನ ರಜೆ ಇರುವುದರಿಂದ ಕೊಡಗಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಬಿಕೋ ಎನ್ನುತ್ತಿದ್ದ ರೆಸಾರ್ಟ್, ಹೋಂ ಸ್ಟೇಗಳು ಭರ್ತಿಯಾಗಿವೆ.


ಮಡಿಕೇರಿ-ಬೆಂಗಳೂರು ಕಡೆಗೆ ಭಾನುವಾರ ಭಾರಿ ಸಂಖ್ಯೆಯಲ್ಲಿ ಸಂಚಾರ ಇದ್ದುದರಿಂದ ಸಂತೆಗೆ ಬರುವ ಗ್ರಾಹಕರು ರಸ್ತೆ ದಾಟಲು ಪ್ರಯಾಸ ಪಡುವಂತಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net