ಸುಂಟಿಕೊಪ್ಪ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಸತ್ ರಚನೆ

15sunti01
ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ವಯೋ ನಿವೃತ್ತಿಗೊಂಡಿರುವ ಸಿ.ಟಿ.ಸೋಮಶೇಖರ್ ಸನ್ಮಾನಿಸಲಾಯಿತು. ಬಾಲಕೃಷ್ಣ, ಸಿರಿಲ್ ರಾಡ್ರಿಗಸ್, ಸಹಶಿಕ್ಷಕರು, ಸಿಬ್ಬಂದಿ ಇದ್ದರು.
Published on

ಸುಂಟಿಕೊಪ್ಪ : ಸುಂಟಿಕೊಪ್ಪ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಕ್ಕಳ ಸಂಸತ್ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

2025-26ನೇ ಸಾಲಿಗೆ ಶೈಕ್ಷಣಿಕ ಸಂಸತ್ ಮಂತ್ರಿ ಮಂಡಲ ನಾಯಕನಾಗಿ ಅಜಿತ್, ಉಪನಾಯಕಿಯಾಗಿ ವೈಷ್ಣವಿ, ಆಹಾರ ಮಂತ್ರಿಯಾಗಿ ರಿದಾ ಮರಿಯಮ್, ಉಪಮಂತ್ರಿಯಾಗಿ ನಿಶ್ಮಿತಾ, ರಂಜಿತಾ, ಆರೋಗ್ಯ ಮಂತ್ರಿಯಾಗಿ ಮೊಹಮ್ಮದ್ ಶಹಬಾಸ್, ಉಪಮಂತ್ರಿಯಾಗಿ ರೆಹನತ್, ಸ್ಚಚ್ಛತಾ ಮಂತ್ರಿ ಹಾಗೂ ಶಾಲಾ ಭದ್ರತಾ ಸಮಿತಿ ಮಂತ್ರಿಯಾಗಿ ಲೇಖಿಕ್, ಉಪ ಮಂತ್ರಿಯಾಗಿ ಅರ್ಪಿತಾ ರಾಡ್ರಿಗಸ್, ಕ್ರೀಡಾಮಂತ್ರಿಯಾಗಿ ಶಶಿಕಾಂತ, ಉಪಮಂತ್ರಿಯಾಗಿ ಸೃಜನಾ, ಸಾಂಸ್ಕೃತಿಕ ಮತ್ತು ವಾರ್ತಾ ಮಂತ್ರಿಯಾಗಿ ದೀಕ್ಷಾ, ಉಪಮಂತ್ರಿಯಾಗಿ ನೌಶಿನಾ ಅವರಿಗೆ ಪ್ರಮಾಣ ವಚನ ಭೋಧಿಸುವ ಮೂಲಕ ಅಧಿಕಾರ ಹಸ್ತಾಂತರಿಸಲಾಯಿತು.

ಇದೇ ಸಂದರ್ಭ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ 16 ವರ್ಷಗಳ ಕಾಲ ಸೇವೆ ಸಲ್ಲಿಸಿ ವಯೋನಿವೃತ್ತಿಗೊಂಡಿರುವ ಸಿ.ಟಿ.ಸೋಮಶೇಖರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರೌಢಶಾಲೆಯ ಉಪ ಪ್ರಾಂಶುಪಾಲ ಬಾಲಕೃಷ್ಣ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಿರಿಲ್ ರಾಡ್ರಿಗಸ್, ಸಹಶಿಕ್ಷಕರುಗಳು ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net