ಸುಂಕಾತೊಣ್ಣೂರು ಗ್ರಾಪಂಗೆ ಆಯ್ಕೆ

9-pnp 2
Published on

ಪಾಂಡವಪುರ: ತಾಲೂಕಿನ ಸುಂಕಾತೊಣ್ಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರಾಗಿ ರೈತ ಸಂಘ-ಕಾಂಗ್ರೆಸ್ ಮೈತ್ರಿಕೂಟ ಬೆಂಬಲಿತ ಅಭ್ಯರ್ಥಿಗಳಾದ ಜಯಶೀಲಾ ಹಾಗೂ ಅತ್ತಿಗಾನಹಳ್ಳಿ ಸಿ.ನಾಗರಾಜು ಚುನಾಯಿತರಾದರು.

ಒಟ್ಟು 20 ಸದಸ್ಯರ ಬಲ ಇರುವ ಗ್ರಾಪಂನ ಎರಡನೇ ಅವಯ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಬುಧವಾರ ನಿಗದಿಯಾಗಿದ್ದ ಚುನಾವಣೆಯಲ್ಲಿ ರೈತ ಸಂಘ-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಗಳಾಗಿ ಜಯಶೀಲಾ ಮತ್ತು ಸಿ.ನಾಗರಾಜು ಹಾಗೂ ಜೆಡಿಎಸ್ ಬೆಂಬಲಿತರಾಗಿ ಮಮತಾ ಮತ್ತು ಹೇಮಂತ್‌ಕುಮಾರ್ ಕ್ರಮವಾಗಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿದ್ದರು. ಚುನಾವಣೆ ಪ್ರಕ್ರಿಯೆಯಲ್ಲಿ ಜಯಶೀಲಾ (11) ಅವರು ಪ್ರತಿಸ್ಪರ‌್ ಮಮತಾ(9)ವಿರುದ್ಧ 2 ಮತಗಳ ಅಂತರದಲ್ಲಿ ಗೆಲುವು ಕಂಡರು.

ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ‌್ಸಿದ್ದ ಸಿ.ನಾಗರಾಜು(12) ತಮ್ಮ ಪ್ರತಿಸ್ಪರ‌್ ಹೇಮಂತ್‌ಕುಮಾರ್(8) ವಿರುದ್ಧ 4 ಮತಗಳ ಅಂತರದಲ್ಲಿ ಚುನಾಯಿತರಾದರು. ಚುನಾವಣಾಕಾರಿಯಾಗಿದ್ದ ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಾಕಾರಿ ಪ್ರಕಾಶ್ ಇಬ್ಬರ ಆಯ್ಕೆಯನ್ನು ಅಕೃತವಾಗಿ ಘೋಷಿಸಿದರು.

ರೈತ ನಾಯಕಿ ಸುನೀತಾ ಪುಟ್ಟಣ್ಣಯ್ಯ ಅವರು ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿನಂದಿಸಿದರು. ಕಾಂಗ್ರೆಸ್ ಮುಖಂಡ ಎಚ್.ಮಂಜುನಾಥ್, ಗ್ರಾಪಂ ಸದಸ್ಯರಾದ ಶೀಲಾ ಶಿವಕುಮಾರ್, ನಳಿನಾಕ್ಷಿ, ಕನ್ಯಮ್ಮ, ರಾಜಮ್ಮ, ಪುಟ್ಟಸ್ವಾಮಿಗೌಡ, ಹೇಮಕುಮಾರ್, ಕೇಶವಮೂರ್ತಿ, ಕೆಪಿಸಿಸಿ ಸದಸ್ಯ ಎಚ್.ತ್ಯಾಗರಾಜು, ಮುಖಂಡರಾದ ಕುಮಾರ್, ಯಜಮಾನ್ ಸ್ವಾಮೀಗೌಡ, ಚಂದ್ರಶೇಖರ್, ಎಸ್.ಕೆ.ಪ್ರಕಾಶ್, ಪರಮೇಶ್, ನಂದೀಶ್, ಮಹದೇಶ್ವರಪುರ ದೇವರಾಜು, ಬೇಕರಿ ದೇವರಾಜು, ಅತ್ತಿಗಾನಹಳ್ಳಿ ಮಹೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net