

ಹುಬ್ಬಳ್ಳಿ: ಇಲ್ಲಿನ ಶಾಂತಿನಗರದ ಜನರು ಸೀಲ್ಡೌನ್ಗೆ ಬೆಚ್ಚಿ ಬಿದ್ದಿದ್ದಾರೆ. ಇದೇ ಪ್ರದೇಶದಲ್ಲಿದ್ದ ತಂದೆ (ಪಿ-589) ಮತ್ತು ಮಗನಿಗೆ (ಪಿ-1124) ಸೋಂಕು ದೃಢಪಟ್ಟಿತ್ತು. ಪಿ-589 ಸೋಂಕಿನಿಂದ ಮುಕ್ತಗೊಂಡು ಮನೆಗೆ ಬಂದಿದ್ದಾರೆ. ಆದರೆ, ಪಿ-1124 ಸೋಂಕಿನಿಂದ ಇನ್ನು ಗುಣವಾಗಬೇಕಿದೆ. ಆತ ಆಸ್ಪತ್ರೆಯಿಂದ ಬಿಡುಗಡೆಯಾಗುವವರೆಗೆ ಈ ಪ್ರದೇಶ ಸೀಲ್ಡೌನ್ ಆಗಿಯೇ ಮುಂದುವರಿಯಲಿದೆ.
ಪೊಲೀಸರಿಂದ ತಿಳಿವಳಿಕೆ: ಹೊರಗಡೆ ಸ್ವಚ್ಛಂದವಾಗಿ ತಿರುಗಿಸಿಕೊಂಡಿದ್ದ ಜನರು ಕರೊನಾ ಸೋಂಕು ಹರಡುತ್ತಿದ್ದಂತೆ ಮನೆಯಲ್ಲಿ ಬಂಧಿಯಾಗಿದ್ದಾರೆ. ಮಹಾನಗರ ಪಾಲಿಕೆ ಸಿಬ್ಬಂದಿ ಪೂರೈಸುವ ಅಗತ್ಯ ವಸ್ತುಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಅಲ್ಲದೆ, ದಿನಸಿ ಮತ್ತು ತರಕಾರಿ ಮಾರಾಟ ಮಾಡಲು ಬಂದಾಗ ಮನೆಯಿಂದ ಬರುವ ಒಬ್ಬರು ಪಡೆದು ಮರಳಿ ಮನೆ ಸೇರುವಂತೆ ಪೊಲೀಸರು ತಿಳಿಹೇಳುತ್ತಿದ್ದಾರೆ.