ಸೀಲ್ ಡೌನ್ ಗ್ರಾಮಗಳಲ್ಲಿ ತಪಾಸಣೆ ಬಿಗು

10-37-38-aivarndu-seal-dwn
Published on

ಮಂಗಳೂರು: ಗ್ರಾಮಾಂತರ ಭಾಗಗಳಲ್ಲಿ ಕರೊನಾ ಸೋಂಕು ಹೆಚ್ಚಳವಾದ ಗ್ರಾಮಗಳನ್ನು ವಾರ ಕಾಲ ಸೀಲ್ ಡೌನ್ ಮಾಡಲಾಗಿದ್ದು, ಮನೆಯಿಂದ ಹೊರ ಬರುವವರನ್ನು ಪೊಲೀಸರು ತಪಾಸಣೆ ಬಿಗುಗೊಳಿಸಿದ್ದಾರೆ.

ಸುಳ್ಯ, ಬೆಳ್ತಂಗಡಿ, ಕಡಬ ಮೊದಲಾದ ತಾಲೂಕುಗಳಲ್ಲಿ ಕರೊನಾ ಸೋಂಕು ಹೆಚ್ಚಾಗಿರುವ ಗ್ರಾಮಗಳನ್ನು ಜೂ.21 ರ ತನಕ ಸೀಲ್ ಡೌನ್ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು.

ಸೀಲ್ ಡೌನ್ ಆಗಿರುವ ಗ್ರಾಮಗಳಲ್ಲಿ ಸ್ಥಳೀಯ ನಿವಾಸಿಗಳಿಗೆ ಅವಶ್ಯ ವಸ್ತುಗಳನ್ನು ಗ್ರಾಪಂ ಕಾರ್ಯಪಡೆ ತಲುಪಿಸುವ ವ್ಯವಸ್ಥೆ ಮಾಡಿದೆ. ಗ್ರಾಮಗಳಿಗೆ ಪ್ರವೇಶ ಸ್ಥಳಗಳಲ್ಲಿ ಬ್ಯಾರಿಕೇಡ್ ಹಾಕಿ ಕಾರ್ಯಪಡೆ ಸದಸ್ಯರು ಹಾಗೂ ಪೊಲೀಸ್ ಸಿಬ್ಬಂದಿ ನಿಗಾ ಇಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net