ಸೀತಿಮನಿಯಲ್ಲಿ ಅ.೩ ರಿಂದ ನವರಾತ್ರಿ ಸಂಭ್ರಮ

bkt-14-1 a
ಸೀತಾಚಲವಾಸ ವೆಂಕಟೇಶ್ವರ
Published on

ಬಾಗಲಕೋಟೆ: ಪುರಾಣದ ಐತಿಹ್ಯವುಳ್ಳ ತಾಲೂಕಿನ ಸೀತಿಮನಿಯಲ್ಲಿ ಅ.೩ ರಿಂದ ಅ.೧೨ ರವರೆಗೆ ಸಂಭ್ರಮದಿಂದ ನವರಾತ್ರಿ ಉತ್ಸವ ನಡೆಯಲಿದೆ, ಉತ್ಸವದ ನಿಮಿತ್ತ ನಾನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸೀತಿಮನಿಯಲ್ಲಿರುವ ಸೀತಾಚಲವಾಸ ವೆಂಕಟೇಶ್ವರ ದೇವಸ್ಥಾನದಲ್ಲಿ ೯ ದಿನದವರೆಗೆ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಸ್ವಯಂಭೂ ಮೂರ್ತಿಯಿರುವುದರಿಂದ ಈ ದೇವಸ್ಥಾನಕ್ಕೆ ವಿಶೇಷ ಐತಿಹ್ಯವಿದೆ. ದೇವಸ್ಥಾನದ ಬಳಿಯಿರುವ ಹೊಂಡಗಳನ್ನು ಲವ, ಕುಶ ಹೊಂಡಗಳೆಂದು ಕರೆಯಲಾಗುತ್ತದೆ. ಸೀತೆ ಇಲ್ಲಿಗೆ ಲವ, ಕುಶರೊಂದಿಗೆ ಭೇಟಿ ನೀಡಿದ್ದಳು ಎಂದು ಪುರಾಣ ಗ್ರಂಥಗಳಲ್ಲಿ ತಿಳಿಸಲಾಗಿದೆ.

ನವರಾತ್ರಿ ಅಂಗವಾಗಿ ಪ್ರತಿ ದಿನ ವೆಂಕಟೇಶ್ವರನಿಗೆ ಸುಪ್ರಭಾತ, ಕಕ್ಕಡಾರತಿ, ಪಂಚಾಮೃತ ಅಭಿಷೇಕ, ಪುಷ್ಪಾರ್ಚನೆ, ಲೋಕ ಕಲ್ಯಾಣರ್ಥವಾಗಿ ಸುದರ್ಶನ ಹೋಮ ಹಮ್ಮಿಕೊಳ್ಳಲಾಗಿದೆ. ಅ.೧೨ ರಂದು ವಿಜಯದಶಮಿ ನಿಮಿತ್ತ ಶಮಿ ವೃಕ್ಷದ ಪೂಜೆ, ಬನ್ನಿ ಮುಡಿಯುವ ಕಾರ್ಯಕ್ರಮ ನೆರವೇರಲಿದೆ. ಪ್ರತಿ ದಿನರಾಯಚೂರಿನ ಸರ್ವೋತ್ತಮ ಆಚಾರ್ಯ ಜೋಶಿ ಅವರು ಶ್ರೀ ವೆಂಕಟೇಶ ಮಹಾತ್ಮ ಪುರಾಣ ನಡೆಸಿಕೊಡಲಿದ್ದಾರೆ. ಅ.೯ ರಂದು ಲೋಕಕಲ್ಯಾಣಕ್ಕಾಗಿ ಶ್ರೀರಾಮ ತಾರಕ ಹೋಮ ಜರುಗಲಿದೆ.

ಅ.೩ ರಂದು ಸಂಜೆ ೭.೩೦ಕ್ಕೆ ಜಗನ್ನಾಥ ಮುತ್ತತ್ತಿ ಅವರಿಂದ ಗಾಯನ,ಅ.೪ ರಂದು ಸಂಜೆ ೭ ಗಂಟೆಗೆ ಅನಘಾ ಪಾಟೀಲ, ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ಶಾಮ ಆಲೂರ, ಅ.೫ ರಂದು ೭.೩೦ ಗಂಟೆಗೆ ಸುನಯನಾ ದೇಶಪಾಂಡೆ, ೮.೩೦ ಗಂಟೆಗೆ ನಂದಾ ಮಿರ್ಜಿ ಸಂಗೀತ, ಅ.೬ ರಂದು ಸಂಜೆ ೬ ಗಂಟೆಗೆ ರಘೋತ್ತಮ ಆಚಾರ್ಯ ನಾಗಸಂಪಗಿ ಪ್ರವಚನ, ೭ ಗಂಟೆಗೆ ಮೈಸೂರು ರಾಮಚಂದ್ರ ಆಚರ್ಯ ಅವರಿಂದ ಸಂಗೀತ ಸೇವೆ, ಅ.೭ ರಂದು ಸಂಜೆ ೬ ಗಂಟೆಗೆ ಕೇಶವ ಜೋಶಿ ತಂಡದಿಂದ ತಬಲಾ ಸೋಲೋ, ೭ ಗಂಟೆಗೆ ಡಾ.ವಿಜಯಕುಮಾರ ಪಾಟೀಲ ಅವರಿಂದ ಸಂಗೀತ ಲಹರಿ, ಅ.೮ ರಂದು ಸಂಜೆ ೬.೩೦ ಗಂಟೆಗೆ ಜಯರ್ತಿ ತಾಸಗಾಂವಿ ಹಾಗೂ ಪರಿಮಳಾ ಗಿರಿಯಾಚಾರ್ಯ ಅವರಿಂದ ಸಂಗೀತ ಕಾರ್ಯಕ್ರಮ, ಅ.೯ ರಂದು ಸಂಜೆ ೭ ಗಂಟೆಗೆ ಪ್ರಸಾದ ಪ್ರಭು, ೮ ಗಂಟೆಗೆ ನಾರಾಯಣ ತಾಸಗಾಂವ ಅವರಿಂದ ಸಂಗೀತ ಸೇವೆ, ಅ.೧೦ ರಂದು ಸಂಜೆ ೬ ಗಂಟೆಗೆ ಸಂತೋಷ ಗದ್ದನಕೇರಿ ಅವರಿಂದ ಸಂಗೀತ ಸೇವೆ, ಅ.೧೧ ರಂದು ಸಂಜೆ ೭ ಗಂಟೆಗೆ ಅನಂತ ಕುಲಕರ್ಣಿ ಹಾಗೂ ಮಾಳವಿಕ ಜೋಶಿ ಅವರಿಂದ ಸಂಗೀತ ಸುಧೆ ಜರುಗಲಿದೆ ಎಂದು ದೇವಸ್ಥಾನ ಸೇವಾ ಸಮಿತಿಯ ಕಾರ್ಯದರ್ಶಿ ನರಸಿಂಹ ಆಲೂರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net