ಸೀತಾರಾಮ ಸನ್ನಿಧಿಯಲ್ಲಿ ಕಾರ್ತಿಕೋತ್ಸವ

Karthika
Published on

ಚಿತ್ರದುರ್ಗ: ನಗರದ ಧರ್ಮಶಾಲಾ ರಸ್ತೆಯಲ್ಲಿ ಇರುವ ಸೀತಾರಾಮ ಸನ್ನಿಧಿಯಲ್ಲಿ ಗುರುವಾರ ಕಡೆ ಕಾರ್ತಿಕ ಮಹೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.

ಕಾರ್ತಿಕೋತ್ಸವದ ಅಂಗವಾಗಿ ಶ್ರೀರಾಮ, ಸೀತಾ ಮಾತೆಗೆ ಬೆಳಗ್ಗೆಯಿಂದಲೇ ವಿಶೇಷ ಪೂಜೆ ನೆರವೇರಿದವು. ಸಂಜೆ ದೀಪೋತ್ಸವದಲ್ಲಿ ಪಾಲ್ಗೊಂಡ ಭಕ್ತರು ಭಕ್ತಿ ಸಮರ್ಪಿಸಿ, ಇಷ್ಟಾರ್ಥ ಈಡೇರಿಕೆಗಾಗಿ ಪ್ರಾರ್ಥಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net