ಸಿಹಿ ಹಂಚಿ ಬಿಜೆಪಿ ಕಾರ್ಯಕರ್ತರ ಸಂಭ್ರಮ

WEB
Published on

ಶಿಕಾರಿಪುರ: ಇಂದು ನಾವು ಹೆಮ್ಮೆ ಪಡಬೇಕಾದ ದಿನ. ಬುಡಕಟ್ಟು ಜನಾಂಗದ ಹೆಣ್ಣುಮಗಳು ರಾಷ್ಟ್ರದ ಪ್ರಥಮ ಪ್ರಜೆಯಾಗಿ ಆಯ್ಕೆಯಾಗಿದ್ದಾರೆ. ಸಂವಿಧಾನದ ಆಶಯದಂತೆ ಬಿಜೆಪಿ ಅವರನ್ನು ಬೆಂಬಲಿಸಿ, ರಾಷ್ಟ್ರಪತಿ ಸ್ಥಾನದ ಗೌರವ ಕಲ್ಪಿಸಿದೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ವೀರೇಂದ್ರ ಪಾಟೀಲ್ ಹೇಳಿದರು.

ನೂತನ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಜೈಕಾರ ಕೂಗಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಇದೊಂದು ಐತಿಹಾಸಿಕವಾದ ದಿನ. ದ್ರೌಪದಿ ಮುರ್ಮು ಅವರು ಸರ್ವರ ಹಿತಕಾಯುವ ಮಹಾತಾಯಿಯಾಗಲಿದ್ದಾರೆ ಎಂದು ಹೇಳಿದರು.

ಬುಡಕಟ್ಟು ಜನಾಂಗದ ಜಿಲ್ಲಾ ಉಪಾಧ್ಯಕ್ಷ ಹುಚ್ಚಪ್ಪ, ಹಾಲಪ್ಪ, ವಸಂತ್ ಗೌಡ, ಪರಮೇಶ್ ಸಾಲೂರು, ಬಸವರಾಜ್, ರುದ್ರೇಶ್, ಸಾಲೂರು ರುದ್ರಮೂರ್ತಿ, ನಿಂಬೆಗೊಂದಿ ಸುರೇಶ್, ಗಣೇಶ್, ಸಂಡ ಮಾಲತೇಶ್ ನಾಡಿಗೇರ್, ತಾಳಗುಂದ ಸತೀಶ್, ಸಂಕ್ಲಾಪುರ ಹನುಮಂತಪ್ಪ, ರಾಜಶೇಖರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net