ಸಿಹಿ ತಿಂಡಿಗಳ ನೈವೇದ್ಯ ಸಮರ್ಪಣೆ

28 sirigeri 01 july photo
Published on

ಸಿರಿಗೇರಿ: ಗ್ರಾಮದ ಶ್ರೀ ನಾಗನಾಥೇಶ್ವರ ದೇವಸ್ಥಾನದಲ್ಲಿ ನಾಗ ದೇವತೆಗಳಿಗೆ ಮಹಿಳೆಯರು ಭಕ್ತಿಯಿಂದ ಪೂಜೆ ಸಲ್ಲಿಸಿ ಹಾಲೆರೆದರು. ಮನೆಗಳ ಮುಂದೆ ರಂಗೋಲಿಯಲ್ಲಿ ನಾಗರಹಾವಿನ ಚಿತ್ರ ಬರೆದು ಪೂಜೆ ಸಲ್ಲಿಸಿದರು. ಮನೆಯಲ್ಲಿ ತಯಾರಿಸಿದ ಹಳ್ಳಿಟ್ಟು, ತಂಬಿಟ್ಟು, ಶೇಂಗಾ ಉಂಡೆ, ಎಳ್ಳುಂಡೆ ಸೇರಿದಂತೆ ವಿವಿಧ ಸಿಹಿ ತಿನಿಸುಗಳನ್ನು ನೈವೇದ್ಯ ಮಾಡಿ ಸಮರ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net