ಚಿತ್ರದುರ್ಗ: ಕೊಲೆಯಾಗುವುದಕ್ಕೂ ಮುನ್ನ ರೇಣುಕಸ್ವಾಮಿ ಜೂ. 8ರಂದು ಐಯುಡಿಪಿ ಬಡಾವಣೆಯ ಅಪೋಲೋ ಮೆಡಿಕಲ್ ಫಾರ್ಮಸಿಗೆ ಕೆಲಸಕ್ಕೆ ತೆರಳಲು ಚಿತ್ರದುರ್ಗದಲ್ಲಿ ಸಂಚರಿಸಿದ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ..ಅಂದು ಬೆಳಗ್ಗೆ 9.48ಕ್ಕೆ ಬಾಲಾಜಿ ಬಾರ್ ಅಂಡ್ ರೆಸ್ಟೋರೆಂಟ್ ಮಾರ್ಗವಾಗಿ ಸಂಚರಿಸಿದ ಕೊನೆಯ ದೃಶ್ಯವಿದು ಎನ್ನಲಾಗಿದೆ.