ಸಿಸಿ ರಸ್ತೆ ಕಾಮಗಾರಿ ಬಿಲ್​ಗೆ ಕಮೀಷನ್​: ಸಚಿವ ಕ್ಷೇತ್ರದಲ್ಲೇ ಘಟನೆ: ಇಬ್ಬರ ಅಮಾನತು

crime
Published on

ಕಲಬುರಗಿ: ಸಿಸಿ ರಸ್ತೆ ಕಾಮಗಾರಿಯ ಬಿಲ್​ ಮಾಡಲು ಕಮೀಷನ್​ ಬೇಡಿಕೆ ಇಟ್ಟ ಪಂಚಾಯತ್​ ರಾಜ್​ ಇಂಜಿನಿಯರ್​ ವಿಭಾಗದ ಕಿರಿಯ ಇಂಜಿನಿಯರ್​ ಶ್ರೀಪಾದ ಕುಲ್ಕರ್ಣಿಯ ವಿಡಿಯೋ ವೈರಲ್​ ಆಗಿದ್ದು, ಹಣಕ್ಕೆ ಬೇಡಿಕೆ ಇಟ್ಟ, ಕಮೀಷನ್​ ಕೇಳಿದ ಜೆಇ, ಪಿಡಿಒರನ್ನು ಅಮಾನತು ಮಾಡಲಾಗಿದೆ.

ಸಚಿವ ಪ್ರಿಯಾಂಕ್​ ರ್ಖಗೆ ಕ್ಷೇತ್ರ, ಅವರ ಸ್ವಗ್ರಾಮ ಚಿತ್ತಾಪುರ ತಾಲೂಕಿನ ಗುಂಡಗುರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದ್ದ ಸಿಸಿ ರಸ್ತೆ ಕಾಮಗಾರಿಗೆ ಬಿಲ್​ ಮಾಡಲು ಗುತ್ತಿಗೆದಾರರ ಜತೆ ಹಣಕ್ಕೆ ಬೇಡಿಕೆ ಇಡುವ ಮಾತುಕತೆಯ ವಿಡಿಯೋ ವೈರಲ್​ ಆಗಿದೆ. 15ನೇ ಹಣಕಾಸಿನ ಯೋಜನೆ ಅಡಿ ಕಾಮಗಾರಿ ನಡೆದಿದೆ.

ಕಾಮಗಾರಿ ಬಿಲ್​ಗೆ ಶೇ.5 ಪರ್ಸೆಂಟ್​ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಅದರ ಜತೆಗೆ ಗ್ರಾಪಂ ಪಿಡಿಒಗೂ ಶೇ.3 ಲಂಚ ಕೊಡಬೇಕು ಎಂದು ಜೆಇ ಹೇಳುತ್ತಾರೆ. ಶೇ.12 ಪರ್ಸೆಂಟ್​ 51,612 ಜಿಎಸ್​ಟಿ ಆಗುತ್ತದೆ. ಎಇಇಗೆ ಶೇ.3 ಕಮೀಷನ್​, ನಮ್ಮದು(ಜೆಇ) ಶೇ.5 ಪರ್ಸೆಂಟ್​ ಆಗುತ್ತದೆ. ಜತೆಗೆ ಪಿಡಿಒಗೆ ಶೇ.3 ಕಮೀಷನ್​ ಕೊಡಬೇಕು ಎನ್ನುವ ವಿಡಿಯೋ ವೈರಲ್​ ಆಗಿದೆ.

ಇಬ್ಬರು ಅಧಿಕಾರಿಗಳ ಅಮಾನತು: ಚಿತ್ತಾಪುರ ತಾಲೂಕಿನ ಗುಂಡಗುರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಿಸಿ ರಸ್ತೆ ಕಾಮಗಾರಿ ಬಿಲ್​ ಮಾಡಲು ಕಮೀಷನ್​ ಬೇಡಿಕೆ ಇಟ್ಟ ಪಂಚಾಯತ್​ ರಾಜ್​ ಇಂಜಿನಿಯರ್​ ಶ್ರೀಪಾದ ಕುಲ್ಕರ್ಣಿಯನ್ನು ಮತ್ತು ಕರ್ತವ್ಯ ಲೋಪ ಎಸಗಿದ ಗುಂಡಗುರ್ತಿ ಗ್ರಾಪಂ ಪಿಡಿಒ ಮಂಜುಶ್ರೀಯನ್ನು ಅಮಾನತು ಮಾಡಿ, ಜಿಪಂ ಸಿಇಒ ಆದೇಶಿಸಿದ್ದಾರೆ. ಇಲಾಖೆ ವಿಚಾರಣೆ ಬಾಕಿ ಇಟ್ಟು ಅಮಾನತು ಮಾಡಿ ಆದೇಶ ಮಾಡಲಾಗಿದೆ. ಗುತ್ತಿಗೆದಾರ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ವಿಡಿಯೋ ಹರಿದಾಡಿದ್ದು, ಜೆಇ ಶ್ರೀಪಾದ ಕುಲ್ಕರ್ಣಿಯನ್ನು ಅಮಾನತು ಮಾಡಿ, ತಕ್ಷಣ ಜಾರಿಗೆ ಬರುವಂತೆ ಆದೇಶಿಸಿದ್ದಾರೆ.

ಪಿಡಿಒ ವಿರುದ್ಧ ದೂರು: ಗುಂಡಗುರ್ತಿ ಗ್ರಾಪಂ ಪ್ರಭಾರಿ ಪಿಡಿಒ ಮಂಜುಶ್ರೀ ಜಹಾಗೀರದಾರ್​ ವಿರುದ್ಧ ಗ್ರಾಪಂ ಅಧ್ಯೆ ಸುವರ್ಣ ಸಣ್ಣಕ್ಕಿ ಜಿಪಂ ಸಿಇಒಗೆ ಪತ್ರ ಬರೆದು, ಪಿಡಿಒ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರು ನೀಡಿದ್ದರು. ಈ ಬಗ್ಗೆ ಚಿತ್ತಾಪುರ ತಾಪಂನವರು ಸ್ಪಷ್ಟನೆ ಕೇಳಿ ನೋಟಿಸ್​ ನೀಡಿದ್ದರೂ ಉತ್ತರಿಸಿರಲಿಲ್ಲ. ಆದ್ದರಿಂದ ಕರ್ತವ್ಯ ಪಾಲನೆಯಲ್ಲಿ ರ್ನಿಲಕ್ಷ$್ಯದ ಆರೋಪದಡಿ ಅಮಾನತು ಮಾಡಿ, ಆದೇಶಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net