ಸಿಸಿ ರಸ್ತೆ ಕಾಮಗಾರಿ ಕಳಪೆ, ಹೊಸಳ್ಳಿ ಭಾಗ್ಯನಗರದ ನಿವಾಸಿಗಳು ಆರೋಪ

CC road work is poor
ಗಂಗಾವತಿ ತಾಲೂಕಿನ ಹೊಸಳ್ಳಿ ಭಾಗ್ಯನಗರ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡ ಸಿಸಿ ರಸ್ತೆ ಕಾಮಗಾರಿ ಕಳಪೆಯಾಗಿರುವುದು.
Published on

ಗಂಗಾವತಿ: ತಾಲೂಕಿನ ಹೊಸಳ್ಳಿ ಭಾಗ್ಯನಗರ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡ ಸಿಸಿ ರಸ್ತೆ ಕಾಮಗಾರಿ ಕಳಪೆಯಾಗಿದ್ದು, ಟೆಂಡರ್ ಷರತ್ತಿನ್ವಯ ಕಾಮಗಾರಿ ನಿರ್ವಹಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ತಾಲೂಕಿನ ಹೊಸಳ್ಳಿಯ ಭಾಗ್ಯ ನಗರದಲ್ಲಿ ವಿಶೇಷ ಅನುದಾನದಡಿ 386 ಮೀ. ಉದ್ದದ ರಸ್ತೆ ಅಭಿವೃದ್ಧಿ ಕೈಗೆತ್ತಿಕೊಂಡಿದ್ದು, ಸಿಸಿ ಕಾಮಗಾರಿಗೆ ಟೆಂಡರ್ ನೀಡಲಾಗಿದೆ. ಕೆಐಆರ್‌ಡಿಎಲ್ ನಿರ್ವಹಣೆಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಟೆಂಡರ್ ನಿರ್ವಹಿಸಿ ಹಲವು ತಿಂಗಳಾದರೂ ಇದುವರೆಗೂ 150 ಮೀ. ಮಾತ್ರ ಅರೆಬರೆ ಕೈಗೊಳ್ಳಲಾಗಿದೆ.

ಟೆಂಡರ್ ಷರತ್ತಿನಂತೆ ಕಾಮಗಾರಿ ನಿರ್ವಹಿಸಿಲ್ಲ, ಗುಣಮಟ್ಟ ಕಾಯ್ದುಕೊಂಡಿಲ್ಲ. ಅರೆಬರೆ ಕಾಮಗಾರಿಯಿಂದ ಸಂಚಾರಕ್ಕೆ ತೊಂದರೆಯಾಗಿದ್ದು, ಕೆಲವೇ ದಿನಗಳಲ್ಲಿ ಕಿತ್ತುಹೋಗುವ ಸಾಧ್ಯತೆಗಳಿವೆ. ಕಾಮಗಾರಿ ಪೂರ್ಣಗೊಳಿಸುವ ಮುನ್ನವೇ ಬಿಲ್ ಎತ್ತುವಳಿಯಾಗಿದ್ದು, ಈ ಬಗ್ಗೆ ಕೆಐಆರ್‌ಡಿಎಲ್ ಇಂಜಿನಿಯರ್‌ನ್ನು ವಿಚಾರಿಸಿದರೆ ಸಮರ್ಪಕ ಉತ್ತರ ನೀಡುತ್ತಿಲ್ಲ. ಕಾಮಗಾರಿ ಗುಣಮಟ್ಟ ಪರಿಶೀಲಿಸದ ಅಧಿಕಾರಿಗಳು, ಗುತ್ತಿಗೆದಾರರೊಂದಿಗೆ ಶಾಮೀಲಾಗಿರುವ ಸಾಧ್ಯತೆಗಳಿವೆ.

ಈ ಬಗ್ಗೆ ಶಾಸಕ ಗಾಲಿ ಜನಾರ್ದನರೆಡ್ಡಿ ಗಂಭೀರ ಪರಿಗಣಿಸಿ ಟೆಂಡರ್ ಷರತ್ತಿನಂತೆ ಕಾಮಗಾರಿ ಪೂರ್ಣಗೊಳಿಸುವಂತೆ ಸ್ಥಳೀಯರಾದ ವೆಂಕಟೇಶ್ವರರಾವ್,ಮರಿಯಪ್ಪ , ಶರಣಪ್ಪ, ದುರ್ಗೇಶ್, ಯಮನೂರ ಇತರರು ಒತ್ತಾಯಿಸಿದರು.

ಈ ಬಗ್ಗೆ ಕೆಐಆರ್‌ಡಿಎಲ್ ಇಇ ರ್ಇಾನ್‌ರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಸಮರ್ಪಕ ಮಾಹಿತಿ ನೀಡದೆ ಸ್ಪಂದಿಸಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net