ಸಿಸಿ ರಸ್ತೆ, ಕಟ್ಟಡ, ಬದು ನಿರ್ಮಾಣ ಕಾಮಗಾರಿ ಪರಿಶೀಲನೆ

bkt-2-3
Published on

ಬಾಗಲಕೋಟೆ:  ಜಿಲ್ಲೆಯ ಹುನಗುಂದ ತಾಲೂಕಿನಿ ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿ ಬರುವ ವಿವಿಧ ಸಿಸಿ ರಸ್ತೆ, ಅಂಗನವಾಡಿ ಕಟ್ಟಡ, ಬದು ನಿರ್ಮಾಣ ಕಾಮಗಾರಿ ಸೇರಿದಂತೆ ವಿವಿದೆಡೆ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಹುನಗುಂದ ತಾಲೂಕಿನ ಸೂಳೆಭಾವಿ ಗ್ರಾಮದಲ್ಲಿ ಕೃಷಿ ಇಲಾಖೆಯ ಗೋ ಕಟ್ಟೆ ಕಾಮಗಾರಿ, ಕಮತಗಿಯಿಂದ ಬೆನಕಟ್ಟಿ ಗ್ರಾಮದ ವರೆಗೆ ರಸ್ತೆ ಕಾಮಗಾರಿ, ಹಿರೇಮಾಗಿ ಗ್ರಾಮದಲ್ಲಿನ ಸಂತ ಸೇವಾಲಾಲ್ ಮಂದಿರ ಹತ್ತಿರ ಸಿಸಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆಯಲ್ಲಿ ಗುಣಮಟ್ಟದ ಕಾಮಗಾರಿಗಳಿಗೆ ಎಚ್ಚಿನ ಗಮನ ಹರಿಸಬೇಕು. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಿದರು.

ಹಿರೇಮಾಗಿ ಗ್ರಾಮದ ನರ್ಸರಿಗೆ ಭೇಟಿ ನೀಡಿದ ಕುರೇರ ಅವರು ಹಸರಿಕರಣಕ್ಕಾಗಿ ಕೈಗೊಂಡ ಅಭಿಯಾನ ಕುರಿತು ಮಾಹಿತಿ ಪಡೆದುಕೊಂಡು ನರ್ಸರಿಯಲ್ಲಿ ಸಸಿಯನ್ನು ನೆಟ್ಟು ನೀರುಣಿಸಿದರು. ಅಮೀನಗಡ ಹೋಬಳಿ ವ್ಯಾಪ್ತಿಯ ಕೃಷಿ ಇಲಾಖೆಯಡಿ ಕೈಗೊಂಡ ಬದು ನಿರ್ಮಾಣ ಕಾಮಗಾರಿ ವೀಕ್ಷಣೆ ಮಾಡಿ ನಂತರ ಹುನಗುಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಕಡತ ವಿಲೇವಾರಿ ಕಾರ್ಯವನ್ನು ಪರಿಶೀಲನೆ ಮಾಡಿದರು.

ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಕಡತ ಪರಿಶೀಲನೆ ಮಾಡಿದ ನಿವೇಶನ ರಹಿತ ಅಂಗನವಾಡಿ ಕೇಂದ್ರಗಳಿಗೆ ನಿವೇಶನ ಗುರುತಿಸುವ ಕಾರ್ಯ ಚುರುಕಾಗಿ ಮಾಡಬೇಕು. ಕೇವಲ ಗುರುತಿಸುವ ಕಾರ್ಯ ಮಾಡಿದರೆ ಸಾಕು ಮುಂದಿನ ಕ್ರಮ ಮೇಲ್ಮಟ್ಟದ ಅಧಿಕಾರಿಗಳು ಮಾಡಲಿದ್ದಾರೆ ಎಂದು ತಿಳಿಸಿದರು. ನಂತರ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳ ಕಾರ್ಯಾಲಯಕ್ಕೆ ಭೇಟಿ ನೀಡಿ ಇಲಾಖೆಯ ಪ್ರಗತಿ ಪರಿಶೀಲನೆ ಕೈಗೊಂಡರು.

ಇಸ್ಲಾಂಪೂರದಲ್ಲಿನ ಡಬ್ಲೂಟಿಪಿ ಕಾಮಗಾರಿ ಪರಿಶೀಲನೆ ಮಾಡಿ ನಂತರ ತಾಲೂಕಾ ವ್ಯಾಪ್ತಿಯಲ್ಲಿ ಬರುವ ವಿವಿಧ ವಸತಿ ನಿಲಯಗಳಿಗೆ ಭೇಟಿ ನೀಡಿ ಮಕ್ಕಳ ಹಾಜರಾತಿ, ಸ್ವಚ್ಛತೆ, ಕಲಿಕಾ ಸಾಮಥ್ರ್ಯ ಪರಿಶೀಲನೆ ಮಾಡಿದರು.

ಭೇಟಿ ಸಮಯದಲ್ಲಿ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಮುರಳಿ ದೇಶಪಾಂಡೆ, ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ ಕಳ್ಳೇನ್ನವರ, ಕೃಷಿ ಉಪನಿರ್ದೇಶಕ ಎಲ್.ಐ.ರೂಢಗಿ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net