

ಕಲಬುರಗಿ: ಜಿಲ್ಲಾದ್ಯಂತ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗೆ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ನಡೆಸಿದ್ದು, ಇಂದಿನಿAದ ಏ.೬ರವರೆಗೆ ಜಿಲ್ಲೆಯ ೧೨೪ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೊಠಡಿಗಳಲ್ಲಿನ ಚವಟುವಟಿಕೆಗಳನ್ನು ಸಿಸಿಟಿವಿ ಕ್ಯಾಮೆರಾ ಹಾಗೂ ಸಿಸಿಟಿವಿ ವೆಬ್‌ಕಾಸ್ಟಿಂಗ್ ಮೂಲಕ ನಿಗಾ ಇಡುವ ಪ್ರಯತ್ನ ಪ್ರಸಕ್ತ ವರ್ಷದಿಂದ ಜಾರಿ ಆಗಲಿದೆ.
ಜಿಲ್ಲೆಯಲ್ಲಿ ೪೮,೩೩೪ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ನಗರ ಸೇರಿ ಎಲ್ಲ ತಾಲೂಕು ಹಂತದ ಪರೀಕ್ಷಾ ಕೇಂದ್ರಗಳ ಮೇಲೆ ಕಣ್ಗಾವಲು ಇಡಲು ವಿಶೇಷ ಮುತುವರ್ಜಿ ವಹಿಸಿ, ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಸರತಿಯಂತೆ ಜಾಗೃತ ದಳ ನಿಯೋಜಿಸಲಾಗಿದೆ.
೪೯ ಮಾರ್ಗ ರಚನೆ, ಬಸ್ ಪ್ರಯಾಣ ಉಚಿತ: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಸಾಗಿಸಲು ಜಿಲ್ಲೆಯಲ್ಲಿ ೪೯ ಮಾರ್ಗಗಳನ್ನು ರಚಿಸಿ ಪ್ರತಿ ಮಾರ್ಗಕ್ಕೆ ಒಬ್ಬರಂತೆ ಎಸ್ಕಾರ್ಟ್ ಸಹಿತ ಮಾರ್ಗಾಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಸಾಮೂಹಿಕ ನಕಲು ತಡೆ, ಸುಸೂತ್ರ ಹಾಗೂ ಪಾರದರ್ಶಕ ಪರೀಕ್ಷೆಗಾಗಿ ಚೀಫ್ ಸೂಪರಿಟೆಂಡAಟ್, ಮಾರ್ಗಾಧಿಕಾರಿ, ಜಾಗೃತ ದಳ ತಂಡ ನಿಯೋಜಿಸಲಾಗಿದೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಲ್ಲಿ ಹೋಗಲು ಉಚಿತ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪ್ರವೇಶ ಪತ್ರವನ್ನು ತೋರಿಸಿ, ಉಚಿತವಾಗಿ ಪ್ರಯಾಣ ಮಾಡಬಹುದು ಎಂದು ಡಿಡಿಪಿಐ ಸಕ್ರೆಪ್ಪಗೌಡ ಬಿರಾದಾರ ತಿಳಿಸಿದರು.
ಅಕ್ರಮದ ಮೇಲೆ ನಿಗಾ: ಜಿಲ್ಲೆಯಲ್ಲಿ ಒಟ್ಟು ೧೨೪ ಪರೀಕ್ಷಾ ಕೇಂದ್ರಗಳಿದ್ದು, ೨೫ ಸೂಕ್ಷö್ಮ, ಎಂಟು ಅತಿ ಸೂಕ್ಷö್ಮ, ೯೧ ಸಾಮಾನ್ಯ ಕೇಂದ್ರಗಳನ್ನು ಗುರುತಿಸಲಾಗಿದೆ. ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮೂಲಕ ಪ್ರತಿ ಪರೀಕ್ಷಾ ಕೇಂದ್ರವನ್ನು ತಾಲೂಕು, ಜಿಲ್ಲಾ ಕೇಂದ್ರದಲ್ಲಿ ನಿಗಾ ಇಡಲಾಗುತ್ತಿದೆ. ಆಯಾ ತಾಲೂಕುಗಳ ಪ್ರತಿ ಕೇಂದ್ರದಲ್ಲಿನ ವಿದ್ಯಾಮಾನಗಳನ್ನು ಮೇಲ್ವಿಚಾರಕರು ವೀಕ್ಷಿಸಲಿದ್ದಾರೆ. ಅಕ್ರಮ, ಅವಘಡ ನಡೆದರೆ ಪರೀಕ್ಷಾ ಕೇಂದ್ರದಲ್ಲಿನ ಮೊಬೈಲ್ ಹೊಂದಿದ ಏಕೈಕ ವ್ಯಕ್ತಿ, ಚೀಫ್ ಸೂಪರಿಟೆಂಡೆAಟ್‌ಗೆ ಕರೆ ಮಾಡಿ, ಮಾಹಿತಿ ನೀಡಲಿದ್ದಾರೆ. ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಧಿಕಾರಿ ಕಚೇರಿ, ಜಿಪಂ ಸಿಇಒ ಕಚೇರಿ ಮತ್ತು ಡಿಡಿಪಿಐ ಕಚೇರಿಯಲ್ಲೂ ವೆಬ್‌ಕಾಸ್ಟಿಂಗ್ ಮೂಲಕ ಪರೀಕ್ಷಾ ಕೇಂದ್ರಗಳ ಚಟುವಟಿಕೆಗಳ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ.